ಅಗಸೆ ಬೀಜದಲ್ಲಿ ಹೇರಳವಾಗಿ ನಾರಿನಾಂಶವಿದೆ. ಇದು ನಿಮ್ಮ ಜೀರ್ಣಕ್ರೀಯೆಯನ್ನು ಸರಾಗವಾಗಿಸುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ಹಾಗೇ ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಜತೆಗೆ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಇದರ ಜತೆಗೆ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಕೂಡ ಸಹಾಯಕವಾಗುತ್ತದೆ.
ಇದರಲ್ಲಿ ಓಮೆಗಾ 3 ಪ್ಯಾಟಿ ಆಸಿಡಿ ಹೆಚ್ಚಿದೆ. ಇದನ್ನು ಒಂದು ಚಮಚ ಹಾಗೇ ತಿನ್ನುವುದರಿಂದ ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಗ್ಲಾಸ್ ಬಿಸಿನೀರಿಗೆ 1 ಚಮಚ ಇದರ ಪುಡಿಯನ್ನು ಮಿಕ್ಸ್ ಮಾಡಿಕೊಂಡು ಕುಡಿಯುವುದರಿಂದ ನಿಮ್ಮ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ. ಜತೆಗೆ ಮುಖದಲ್ಲಿನ ನೆರಿಗೆ, ಕಲೆಗಳು ಕೂಡ ನಿಧಾನಕ್ಕೆ ಮಾಸುತ್ತದೆ.
ಇನ್ನು 1/3 ಕಪ್ ನೀರನ್ನು ಕುದಿಯಲು ಇಟ್ಟು ಅದಕ್ಕೆ 1 ಟೇಬಲ್ ಸ್ಪೂನ್ ಅಗಸೆ ಬೀಜ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಆಫ್ ಮಾಡಿ ಅಗಸೆ ಬೀಜದ ಮಿಶ್ರಣ ಇರುವ ಪಾತ್ರೆಯ ಬಾಯಿಗೆ ಒಂದು ಸ್ವಚ್ಛವಾದ ಬಟ್ಟೆಯನ್ನು ಕಟ್ಟಿ 4 ಗಂಟೆಗಳ ಕಾಲ ಹಾಗೇಯೇ ಬಿಟ್ಟುಬಿಡಿ. ನಂತರ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಒಂದು ಬಾರಿ ಹಾಕಿದ ಮಿಶ್ರಣ ಒಣಗಿದ ಮೇಲೆ ಮತ್ತೊಮ್ಮೆ ಹಾಕಿ ಹೀಗೆ 4 ಸಲ ಹಾಕಿ. ಇದು ಪ್ಯಾಕ್ ರೀತಿ ಆಗುತ್ತದೆ. ಇದು ಒಣಗಿದ ಮೇಲೆ ಶುದ್ಧವಾದ ನೀರಿನಿಂದ ಮುಖ ತೊಳೆಯಿರಿ. ಮುಖ ಕಾಂತಿಯುತವಾಗುವುದನ್ನು ನೀವೇ ನೋಡಬಹುದು.
ಇನ್ನು ಒಂದು ಬೌಲ್ ಗೆ ಮೊಟ್ಟೆ ಒಡೆದು ಹಾಕಿಕೊಳ್ಳಿ. ಇದಕ್ಕೆ 1 ಟೇಬಲ್ ಸ್ಪೂನ್ ಅಗಸೆಬೀಜದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ಕಾಲ ಬಿಟ್ಟು ಬಿಡಿ. ನಂತರ ತೊಳೆದು ಯಾವುದಾದರೂ ಮೊಯಿಶ್ಚರೈಸರ್ ಹಚ್ಚಿಕೊಳ್ಳಿ. ತಿಂಗಳಿಗೆ ಎರಡು ಬಾರಿ ಇದನ್ನು ಮಾಡಿ.