alex Certify ಅಗಸೆ ಬೀಜದ ಪುಡಿಗೆ ಇದನ್ನು ಬೆರೆಸಿ ಮುಖಕ್ಕೆ ಹಚ್ಚಿ ಸೌಂದರ್ಯ ಹೆಚ್ಚಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗಸೆ ಬೀಜದ ಪುಡಿಗೆ ಇದನ್ನು ಬೆರೆಸಿ ಮುಖಕ್ಕೆ ಹಚ್ಚಿ ಸೌಂದರ್ಯ ಹೆಚ್ಚಿಸಿಕೊಳ್ಳಿ

ಅಗಸೆ ಬೀಜದಲ್ಲಿ ಫೈಬರ್, ಉತ್ಕರ್ಷಣಾ ನಿರೋಧಕ ಅಂಶಗಳಿವೆ. ಕೂದಲಿನ ಆರೋಗ್ಯ ಕಾಪಾಡಲು ಇದನ್ನು ಹೆಚ್ಚಾಗಿ ಬಳಸುತ್ತಾರೆ.

ಆದರೆ ಈ ಅಗಸೆ ಬೀಜದಿಂದ ಚರ್ಮದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಇದರಿಂದ ಚರ್ಮದ ಅಲರ್ಜಿ, ದದ್ದುಗಳು, ಚರ್ಮಕ್ಕೆ ಸಂ  ಬಂಧಿಸಿದ ಇತರ ಸಮಸ್ಯೆಗಳನ್ನು ನಿವಾರಿಸಬಹುದು.

*1 ಚಮಚ ಅಗಸೆ ಬೀಜದ ಪುಡಿಗೆ, ½ ಚಮಚ ದಾಲ್ಚಿನ್ನಿ ಪುಡಿ, 1 ಚಮಚ ಮೊಸರು ಇವಿಷ್ಟನ್ನು ಮಿಕ್ಸ್ ಮಾಡಿ ನಯವಾದ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 5 ನಿಮಿಷಗಳ ಕಾಲ ಮಸಾಜ್ ಮಾಡಿ. 10 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿ.

* 1 ಚಮಚ ಅಗಸೆ ಬೀಜದ ಪುಡಿ, 1 ಚಮಚ ಹಾಲು, 1 ಚಿಟಿಕೆ ಅರಶಿನ ಎಲ್ಲವನ್ನೂ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ಪ್ರತಿದಿನ ಮಾಡಿದರೆ ಮುಖದಲ್ಲಿರುವ ಕಲೆಗಳು ಮಾಯವಾಗಿ ಮುಖದ ಚರ್ಮ ಕ್ಲೀನ್ ಆಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...