alex Certify ಅಗಲಿದ ತಂದೆ ನೆನಪಿಗೆ ಪುತ್ರಿ ಮಾಡಿದ ಈ ಕೆಲಸಕ್ಕೆ ನೆಟ್ಟಿಗರಿಂದ ಸಿಕ್ಕಿದೆ ವ್ಯಾಪಕ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗಲಿದ ತಂದೆ ನೆನಪಿಗೆ ಪುತ್ರಿ ಮಾಡಿದ ಈ ಕೆಲಸಕ್ಕೆ ನೆಟ್ಟಿಗರಿಂದ ಸಿಕ್ಕಿದೆ ವ್ಯಾಪಕ ಮೆಚ್ಚುಗೆ

ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು ಸುಲಭವಾದ ವಿಚಾರವಂತೂ ಅಲ್ಲವೇ ಅಲ್ಲ. ಅಗಲಿದ ವ್ಯಕ್ತಿಯ ನೆನಪು ಎಂದಿಗೂ ನಮ್ಮನ್ನು ಕಾಡುತ್ತಲೇ ಇರುತ್ತದೆ. ನಿಖಿತಾ ಖಿಣಿ ಎಂಬ ಹೆಸರಿನ ಮಹಿಳೆ ಕೂಡ ಇಂತದ್ದೇ ನೋವು ಅನುಭವಿಸುತ್ತಿದ್ದಾರೆ. ತಮ್ಮ ತಂದೆಯ ನೆನಪನ್ನು ಜೀವಂತವಾಗಿ ಇರಿಸುವ ಸಲುವಾಗಿ ನಿಖಿತಾ ಒಂದು ವಿಭಿನ್ನವಾದ ಕೆಲಸವನ್ನು ಮಾಡಿದ್ದಾರೆ. ತನ್ನ ತಂದೆಯ ಹಳೆಯ ಶರ್ಟ್​ಗಳಿಂದ ನಿಖಿತಾ ಗಾದಿಗಳನ್ನು ತಯಾರಿಸಿದ್ದು ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಈ ವರ್ಷದ ತಂದೆಯಂದಿರ ದಿನದಂದು ನಿಖಿತಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್​ ಮಾಡಿದ್ದರು. ಇದರ ಜೊತೆಯಲ್ಲಿ ನಿಖಿತಾ ನೀಡಿದ ಶೀರ್ಷಿಕೆ ನೆಟ್ಟಿಗರ ಕಣ್ಣಂಚನ್ನು ಒದ್ದೆಯಾಗಿಸಿದೆ. ಈ ಗಾದಿಯನ್ನು ಮಾಡಲು ನಿಖಿತಾ ಎರಡು ವರ್ಷಗಳ ಸಮಯವನ್ನು ತೆಗೆದುಕೊಂಡಿದ್ದಾರೆ. ತಮ್ಮ ತಂದೆಯ ನೆಚ್ಚಿನ ಬಣ್ಣಗಳಾದ ನೀಲಿ ಹಾಗೂ ಗುಲಾಬಿ ಬಣ್ಣಗಳಲ್ಲಿ ವಿಂಗಡಿಸಿ ಗಾದಿಗಳನ್ನು ಹೊಲಿಸಿದ್ದಾರೆ.

ಈ ಕೆಲಸವನ್ನು ಪೂರ್ಣಗೊಳಿಸಲು 2 ವರ್ಷಗಳ ಸಮಯ ಹಿಡಿದಿದೆ. ಆಶ್ಚರ್ಯಕರ ಎಂಬಂತೆ ಈ ಪ್ಯಾಕೆಜ್​ ನನ್ನ ತಂದೆಯ ಜನ್ಮ ದಿನದಂದು ನನ್ನ ಕೈ ಸೇರಿತ್ತು. ಈ ಪ್ಯಾಕ್​ ಬಿಡಿಸಿ ನೋಡಿದಾಗ ನನಗಾದ ಸಂತೋಷವನ್ನು ನನಗೆ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಪುರ್ಕಲ್​ ಸ್ತ್ರೀ ಶಕ್ತಿ ಜನತೆಗೆ ಬೆಚ್ಚನೆಯ ಗಾದಿಗಳನ್ನು ನೀಡುವುದರ ಜೊತೆಯಲ್ಲಿ ಇಂತಹ ದೇವರ ಕಾರ್ಯಗಳನ್ನು ಮಾಡುತ್ತಿದೆ. ನನ್ನ ತಂದೆಯ ಶರ್ಟ್​ಗಳನ್ನು ಬಳಸಿ ನಾನು ಗಾದಿ ತಯಾರಿಸಿದ್ದೇನೆ. ನನ್ನ ತಂದೆಯನ್ನು ಗೌರವಿಸಲು ಇದಕ್ಕಿಂತ ಒಳ್ಳೆಯ ಐಡಿಯಾ ಮತ್ತೊಂದು ಸಿಗಲಿಕ್ಕಿಲ್ಲ. ಏಕೆಂದರೆ ನನ್ನ ತಂದೆಯ ಶರ್ಟ್​ಗಳನ್ನು ನಾವು ದಾನ ಮಾಡುತ್ತಿದ್ದರೆ ಖಂಡಿತವಾಗಿಯೂ ಅವರಿಗೆ ಬೇಸರವಾಗುತ್ತಿತ್ತು. ಏಕೆಂದರೆ ನನ್ನ ತಂದೆ ಹುಟ್ಟು ಜಿಪುಣ . ಹೀಗಾಗಿ ಮನೆಯಲ್ಲಿ ಅವರ ಇರುವಿಕೆಯ ಅನುಭವ ಪಡೆಯಲು ಇದಕ್ಕಿಂತ ಒಳ್ಳೆಯ ಮಾರ್ಗ ನನಗೆ ತೋರಲಿಲ್ಲ ಎಂದು ಬರೆದುಕೊಂಡಿದ್ದಾರೆ.

https://www.instagram.com/reel/Ce_lrHxg2MO/?utm_source=ig_web_copy_link

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...