ಸಾರ್ವಜನಿಕ ಸ್ಥಳಗಳಲ್ಲಿ ಇಲ್ಲವೇ ಸಭೆ ಸಮಾರಂಭಗಳಲ್ಲಿ ಜೋರಾಗಿ ಸೀನು ಬಂದಾಗ ಅದನ್ನು ನಾವು ತಡೆಯಲು ಯತ್ನಿಸುತ್ತೇವೆ. ಹಾಗೆ ಮಾಡುವುದು ತಪ್ಪು ಎನ್ನುತ್ತದೆ ವಿಜ್ಞಾನ.
ಸೀನುವಿಕೆ ಮಾನವ ದೇಹದ ರೋಗ ನಿರೋಧಕ ವ್ಯವಸ್ಥೆಯ ಒಂದು ಕ್ರಮ. ಇದರಿಂದ ದೇಹದೊಳಗಿನ ವೈರಾಣು, ಧೂಳು, ಬ್ಯಾಕ್ಟೀರಿಯಾ ಮೊದಲಾದ ಸೂಕ್ಷ್ಮಜೀವಿಗಳು ಹೊರಬರುತ್ತದೆ.
ಸೀನನ್ನು ತಡೆದರೆ ನಡುಕಿವಿಯ ಸೋಂಕು ಕಾಣಿಸಿಕೊಳ್ಳಬಹುದು. ಇದರಿಂದ ಮೂಗಿನಲ್ಲಿರುವ ಬ್ಯಾಕ್ಟೀರಿಯಾಗಳು ಹೊರಹೋಗದೆ ದ್ರವ ಒತ್ತಡದಿಂದ ಕಿವಿಯತ್ತ ನುಗ್ಗುತ್ತವೆ. ಇದರಿಂದ ಕಿವಿಯೊಳಗೆ ಸೋಂಕು ಆರಂಭವಾಗಬಹುದು.
ವೃದ್ಧರಲ್ಲಿ ಸೀನುವಿಕೆ ತಡೆದು ಎದೆ ಮೂಳೆ ಮುರಿದ ಉದಾಹರಣೆಗಳೂ ಇವೆ. ಹಾಗಾಗಿ ವಯೋವೃದ್ಧರು ಎಚ್ಚರದಿಂದಿರಿ.
ಸೀನುವಿಕೆ ತಡೆದರೆ ಕಿವಿ ತಮಟೆಯೂ ಹರಿಯುವ ಸಾಧ್ಯತೆ ಇದೆ. ಸೀನುವಾಗ ದೇಹದಿಂದ ದ್ರವವೊಂದು ಹೊರಬರುತ್ತದೆ. ಅದನ್ನು ತಡೆದರೆ ರಕ್ತನಾಳಗಳ ಮೂಲಕ ಮೆದುಳನ್ನು ತಲುಪುವ ಸಾಧ್ಯತೆ ಇದೆ. ಇದು ಮೆದುಳಿನ ರಕ್ತಸ್ರಾವಕ್ಕೂ ಕಾರಣವಾಗಬಹುದು. ಹಾಗಾಗಿ ಯಾವುದೇ ಸಂದರ್ಭವಿರಲಿ ಸೀನು ಬಂದಾಗ ಸೀನಿಬಿಡಿ. ಇದು ಆರೋಗ್ಯಕ್ಕೂ ಒಳ್ಳೆಯದು.