alex Certify ಅಕ್ಷಯ ತೃತೀಯದ ಹೊಸ್ತಿಲಲ್ಲೇ ಆಭರಣ ಪ್ರಿಯರಿಗೆ ಬಿಗ್ ಶಾಕ್; 65,000 ರೂ. ತಲುಪಲಿದೆ ಹಳದಿ ಲೋಹದ ಬೆಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಷಯ ತೃತೀಯದ ಹೊಸ್ತಿಲಲ್ಲೇ ಆಭರಣ ಪ್ರಿಯರಿಗೆ ಬಿಗ್ ಶಾಕ್; 65,000 ರೂ. ತಲುಪಲಿದೆ ಹಳದಿ ಲೋಹದ ಬೆಲೆ….!

ಭಾರತೀಯರಿಗೆ ಹಳದಿ ಲೋಹ ಚಿನ್ನದ ಮೇಲೆ ವ್ಯಾಮೋಹ. ಹೀಗಾಗಿ ಹಬ್ಬ – ಹರಿದಿನಗಳ ಸಂದರ್ಭದಲ್ಲಿ ಹಾಗೂ ಶುಭ ಸಮಾರಂಭಗಳ ವೇಳೆ ಚೆನ್ನಾಗಿ ಖರೀದಿಸುತ್ತಾರೆ. ಆಪತ್ಕಾಲದಲ್ಲಿ ಇದು ನೆರವಿಗೆ ಬರುತ್ತದೆ ಎಂಬುದು ಇನ್ನೊಂದು ಪ್ರಮುಖ ಕಾರಣ. ಇದೀಗ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶಾಕಿಂಗ್ ಸುದ್ದಿಯೊದು ಇಲ್ಲಿದೆ.

ಅದರಲ್ಲೂ ಏಪ್ರಿಲ್ 22ರಂದು ಅಕ್ಷಯ ತೃತೀಯವಿದ್ದು, ಆ ದಿನದಂದು ಚಿನ್ನ ಖರೀದಿಸಿದರೆ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಚಿನ್ನದ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿದ್ದು, ಖರೀದಿಸಲು ಹೋಗುವವರಿಗೆ ಕೈ ಸುಡುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಪ್ರವೃತ್ತಿ ಮುಂದುವರೆಯಲಿದೆ ಎಂದು ಹೇಳಲಾಗಿದೆ.

ಇದೆ ಟ್ರೆಂಡ್ ಮುಂದುವರೆದರೆ ಈ ವರ್ಷ 10 ಗ್ರಾಂ ಚಿನ್ನದ ಬೆಲೆ 65,000 ರೂಪಾಯಿಗಳಿಗೆ ತಲುಪಲಿದೆ ಎಂದು ಹೇಳಲಾಗಿದ್ದು, ಬೆಳ್ಳಿ ಬೆಲೆಯಲ್ಲೂ ಹೆಚ್ಚಳವಾಗುವ ಮೂಲಕ ಕೆಜಿಗೆ 90,000 ರೂಪಾಯಿ ಆಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸಿವೆ. 2020 ರಿಂದಲೂ ಚಿನ್ನ – ಬೆಳ್ಳಿ ಬೆಲೆ ಏರುಮುಖವಾಗುತ್ತಿದ್ದು, ಈ ವರ್ಷ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...