
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಿಂಪಲ್ ಸುನಿ ನಿರ್ದೇಶನದ ಬಹುನಿರೀಕ್ಷಿತ ʼಸಖತ್ʼ ಸಿನಿಮಾದ ಟೀಸರ್ ಇದೇ ತಿಂಗಳು ಅಕ್ಟೋಬರ್ 24ರಂದು ಬಿಡುಗಡೆಯಾಗಲಿದೆ. ಈಗಾಗಲೇ ಈ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಈ ಚಿತ್ರದಲ್ಲಿ ಕುರುಡನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಟಿ-20 ವಿಶ್ವಕಪ್ : ಪಂದ್ಯಕ್ಕೂ ಮುನ್ನ ಚರ್ಚೆಗೆ ಕಾರಣವಾಗಿದೆ ಕೊಹ್ಲಿ ಟ್ವೀಟ್
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ನಡಿ ನಿಶಾ ವೆಂಕಟ್ ಕೋಣಂಕಿ ಹಾಗೂ ಸುಪ್ರೀತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪ್ರೇಮಕ್ಕೆ ಕಣ್ಣಿಲ್ಲ ಎಂಬ ವಿಡಿಯೋ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು, ಈ ಹಾಡು ಗಾನ ಪ್ರಿಯರ ಗಮನ ಸೆಳೆದಿದೆ.
