alex Certify ಅಕ್ಕಿಯಿಂದ ಎಷ್ಟೆಲ್ಲಾ ʼಪ್ರಯೋಜನʼಗಳಿವೆ ನೋಡಿ…. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಕಿಯಿಂದ ಎಷ್ಟೆಲ್ಲಾ ʼಪ್ರಯೋಜನʼಗಳಿವೆ ನೋಡಿ….

ಅಕ್ಕಿ ಪ್ರಮುಖ ಧಾನ್ಯ. ಬಹುತೇಕ ಜನರ ಪ್ರಮುಖ ಆಹಾರವಾಗಿರುವ ಅಕ್ಕಿಯ ಆರೋಗ್ಯ ಪ್ರಯೋಜನಗಳು ಎಲ್ಲರಿಗೂ ಗೊತ್ತಿದೆ. ಈ ಅಕ್ಕಿಯಿಂದ ಕೆಲವು ಇನ್ನಿತರ ಸ್ವಾರಸ್ಯಕರ ಪ್ರಯೋಜನಗಳು ಇಲ್ಲಿವೆ.

* ಬೆಳ್ಳಿ ವಸ್ತುಗಳು ಬಣ್ಣ ಕಳೆದುಕೊಳ್ಳ ಬಾರದೆಂದರೆ ಒಂದು ಪಾತ್ರೆಯಲ್ಲಿ ಸ್ವಲ್ಪ ಅಕ್ಕಿ ಹಾಕಿ ಬೆಳ್ಳಿ ವಸ್ತುಗಳ ಪಕ್ಕದಲ್ಲಿಡಿ. ಇದು ಗಾಳಿಯಲ್ಲಿರುವ ತೇವವೆಲ್ಲವನ್ನೂ ಹೀರಿಕೊಳ್ಳುತ್ತದೆ.

* ಪಾತ್ರೆಗಳು ಪಿಂಗಾಣಿಗಳನ್ನು ಸ್ವಚ್ಛಗೊಳಿಸಲು ಸ್ವಲ್ಪ ಅಕ್ಕಿ, ಸೋಪಿನ ಪುಡಿ, ನೀರನ್ನು ಹಾಕಿ ನಿಧಾನವಾಗಿ ಕಲಕುವುದರಿಂದ ಅಡಿಯಲ್ಲಿರುವ ಕೊಳೆ, ಕಸ, ಮಣ್ಣು ದೂರವಾಗುತ್ತದೆ.

* ಅಕ್ಕಿ ಕಾಳುಗಳು ವಾಸನೆಯನ್ನು ಹೀರಿಕೊಳ್ಳುತ್ತವೆ. ಫ್ರಿಜ್‌ ಅಥವಾ ಕಿಚನ್‌ ಕ್ಲೋಸೆಟ್‌ನಲ್ಲಿ ಒಂದು ಕಪ್‌ ಅಕ್ಕಿ ಇಟ್ಟರೆ ಅದು ಅಲ್ಲಿನ ಕೆಟ್ಟ ವಾಸನೆಯನ್ನು ಹೀರಿಕೊಳ್ಳುತ್ತದೆ.

* ಬೇಯಿಸಿದ ಬಿಸಿ ಅನ್ನವನ್ನು ತೆಳ್ಳನೆಯ ಬಟ್ಟೆಯಲ್ಲಿ ಕಟ್ಟಿ ನೋವಿರುವ ಸ್ನಾಯುಗಳ ಮೇಲೆ ಇಟ್ಟರೆ ನೋವು ನಿವಾರಣೆಯಾಗುತ್ತದೆ. ಇದು ಸ್ನಾಯುಗಳಿಗೆ ವಿಶ್ರಾಂತಿ ಒದಗಿಸುತ್ತದೆ.

* ಅಕ್ಕಿಯು ನೀರಿನ ಪಸೆಯನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ಮೊಬೈಲ್‌ಗೆ ನೀರು ಬಿದ್ದರೆ ತಕ್ಷಣ ಅದರ ಬ್ಯಾಟರಿ ತೆಗೆದು ಒರೆಸಿ ಅಕ್ಕಿಯ ಡಬ್ಬದಲ್ಲಿ ಒಂದೆರಡು ಗಂಟೆ ಇಡಿ. ಇದರಿಂದ ಮೊಬೈಲ್‌ನಲ್ಲಿರುವ ನೀರಿನ ಪಸೆ ಸಂಪೂರ್ಣವಾಗಿ ಇಲ್ಲವಾಗುತ್ತದೆ.

* ಉಪ್ಪಿನ ಬಾಟಲಿಯಲ್ಲಿ ಸ್ವಲ್ಪ ಅಕ್ಕಿ ಹಾಕಿ ಇಟ್ಟರೆ ಅದು ಉಪ್ಪಿನಲ್ಲಿರುವ ತೇವಾಂಶ ಹೀರಿಕೊಳ್ಳುತ್ತದೆ. ಇದರಿಂದ ಉಪ್ಪು ಬಾಟಲಿಯಲ್ಲಿ ಕರಗುವುದಿಲ್ಲ.

* ಅಕ್ಕಿಯನ್ನು ಹುರಿದರೆ, ಅದರಲ್ಲೂ ಕಂದು ಅಕ್ಕಿಯನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದರೆ ಮನೆ ತುಂಬಾ ವಿಶಿಷ್ಟ ಪರಿಮಳ ಬೀರುತ್ತದೆ.

* ಅಕ್ಕಿಯ ಡಬ್ಬದೊಳಗೆ ಕಚ್ಚಾ ಹಣ್ಣುಗಳನ್ನು ಇಟ್ಟರೆ ಅವು ಬೇಗನೆ ಹಣ್ಣಾಗುತ್ತವೆ.

* ಅಕ್ಕಿಯ ಪುಡಿಗೆ ಸ್ವಲ್ಪ ಹಾಲಿನ ಕೆನೆ ಮತ್ತು ಜೇನುತುಪ್ಪ ಹಾಕಿ ಕಲಸಿ ಮುಖಕ್ಕೆ ಲೇಪಿಸಿ ತೊಳೆದರೆ ಚರ್ಮ ಮೃದುವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...