ಕೋಲಾರ: ಅಕಾಲಿಕ ಮಳೆ ಜನರನ್ನ ತತ್ತರಿಸುವಂತೆ ಮಾಡಿದೆ. ಕಳೆದ ಎರಡ್ಮೂರು ದಿನಗಳಿಂದ ಮನೆಯಿಂದ ಹೊರಗೆ ಬರೋದಿಕ್ಕೂ ಜನ ಹಿಂಜರಿಯುತ್ತಿದ್ದಾರೆ. ಇದರ ಜೊತೆಗೆ ರೈತ ಬೆಳೆದ ಬೆಳೆಗೂ ಮಳೆಯಿಂದ ನಷ್ಟ ಅನುಭವಿಸುವಂತಾಗಿದೆ. ದಿನಪೂರ್ತಿ ಸುರಿಯುತ್ತಿರುವ ಮಳೆಯಿಂದಾಗಿ ಟೊಮೋಟೊ ಬೆಳೆ ನಾಶವಾಗುತ್ತಿದೆ.
ಹೌದು, ಕೋಲಾರ ಭಾಗದಲ್ಲಿ ಟೊಮೋಟೋಗೆ ಮಳೆಯಿಂದ ಸಮಸ್ಯೆ ಆಗ್ತಾ ಇದೆ. ಈ ಭಾಗದಲ್ಲಿ ಶೀತಗಾಳಿ ಹಾಗೂ ಮಳೆಯಿಂದಾಗಿ ಸಮಸ್ಯೆ ಆಗುತ್ತಿದೆ. ಕಟಾವಿಗೆ ಬಂದಿದ್ದ ರಾಗಿ, ಮಳೆಯಿಂದಾಗಿ ಕಟಾವಾಗುತ್ತಿಲ್ಲ. ಇನ್ನು ತೊಗರಿ ಹಾಗೂ ಅವರೆ ಬೆಳೆಗಳಿಗೂ ಮಳೆಯ ಎಫೆಕ್ಟ್ ಆಗಿದೆ. ಹೂ ಉದುರುತ್ತಿವೆ.
ಜಡಿ ಮಳೆಯಿಂದಾಗಿ ಟೊಮೆಟೊ ಬೆಳೆಗೆ ತೇವಾಂಶ ಹೆಚ್ಚಾಗಿದೆ. ಹೀಗಾಗಿ ಬೆಳೆಗೆ ಹೂಜಿ ಮತ್ತು ಕೀಟಬಾಧೆ ಅಂಟಿಕೊಂಡಿವೆ. ಗಿಡದಲ್ಲಿರುವ ಟೊಮೆಟೊ ಹಣ್ಣು ಕೀಳಲು ಆಗದೆ ತೋಟದಲ್ಲಿ ಬಿಟ್ಟಿದ್ದಾರೆ ರೈತರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಬಂಡವಾಳವೂ ಕೂಡ ಕೈಗೆ ಸಿಗದಂತೆ ಆಗಿದೆ. ಹೀಗಾಗಿ ಸರ್ಕಾರ ತಮ್ಮ ನೆರವಿಗೆ ಬರಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.