alex Certify ಅಂಬಾನಿ ಕುಟುಂಬದ ಕಿರಿಯ ಸೊಸೆಯಾಗ್ತಿರೋ ರಾಧಿಕಾ ಮರ್ಚೆಂಟ್‌ ಯಾರು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಬಾನಿ ಕುಟುಂಬದ ಕಿರಿಯ ಸೊಸೆಯಾಗ್ತಿರೋ ರಾಧಿಕಾ ಮರ್ಚೆಂಟ್‌ ಯಾರು ಗೊತ್ತಾ ?

ಉದ್ಯಮಿ ಮುಖೇಶ್‌ ಅಂಬಾನಿ ಅವರ ಕಿರಿಯ ಪುತ್ರ ಅನಂತ್‌ ಅಂಬಾನಿ ಕೂಡ ಎಂಗೇಜ್‌ ಆಗಿದ್ದಾರೆ ಅನ್ನೋ ಸುದ್ದಿ ಕೆಲ ದಿನಗಳ ಹಿಂದಷ್ಟೆ ಬೆಳಕಿಗೆ ಬಂದಿತ್ತು. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪರಸ್ಪರ ಇಷ್ಟಪಟ್ಟಿರೋ ವಿಚಾರ ಬಹಿರಂಗವಾಗಿತ್ತು.

ಇದೀಗ ರಾಜಸ್ತಾನದಲ್ಲಿ ಅನಂತ್‌ ಹಾಗೂ ರಾಧಿಕಾ ನಿಶ್ಚಿತಾರ್ಥವೂ ನೆರವೇರಿದೆ. ಅಂಬಾನಿ ಕುಟುಂಬದ ಕಿರಿಯ ಸೊಸೆಯಾಗಲಿರುವ ರಾಧಿಕಾ ಮರ್ಚೆಂಟ್ ಯಾರು ಅನ್ನೋ ಕುತೂಹಲ ಸಹಜ.

ರಾಧಿಕಾ, ಎನ್‌ಕೋರ್ ಹೆಲ್ತ್‌ ಕೇರ್‌ನ ಸಿಇಓ ಮತ್ತು ಉಪಾಧ್ಯಕ್ಷ ವಿರೇನ್ ಮರ್ಚೆಂಟ್ ಅವರ ಪುತ್ರಿ. ರಾಧಿಕಾ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿದ್ದಾರೆ. ರಾಜಕೀಯ ಮತ್ತು ಅರ್ಥಶಾಸ್ತ್ರ ಪದವೀಧರೆ ಈಕೆ. ರಾಧಿಕಾ ಕುಟುಂಬಕ್ಕೆ ಮುಖೇಶ್‌ ಅಂಬಾನಿ ಫ್ಯಾಮಿಲಿ ಹಳೆ ಪರಿಚಯ. ರಾಧಿಕಾ ಕೂಡ ನೀತಾ ಅಂಬಾನಿಗೆ ತುಂಬಾ ಹತ್ತಿರವಾಗಿದ್ದಾರೆ. ಇತ್ತೀಚೆಗೆ ನೀತಾ ಅಂಬಾನಿ ಕೂಡ ರಾಧಿಕಾರ ಅರ್ರಂಗೇಟ್ರಂನಲ್ಲಿ ಹಾಜರಿದ್ದರು. ಇಬ್ಬರೂ ಒಟ್ಟಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಅಷ್ಟೇ ಅಲ್ಲ ಈ ಹಿಂದೆ ಅಂಬಾನಿ ಕುಟುಂಬದವರೊಂದಿಗೆ ರಾಧಿಕಾ ತಿರುಪತಿ ಬಾಲಾಜಿ ದರ್ಶನವನ್ನೂ ಮಾಡಿದ್ದರು. ರಾಧಿಕಾರ ಅರ್ರಂಗೇಟ್ರಂ ಅನ್ನು ಅಂಬಾನಿ ಕುಟುಂಬವೇ ಆಯೋಜಿಸಿತ್ತು. ಇನ್ನು ಮುಖೇಶ್‌ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ನಿಶ್ಚಿತಾರ್ಥಕ್ಕೂ ರಾಧಿಕಾ ಆಗಮಿಸಿದ್ದರು. ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಬಾಲ್ಯದಿಂದಲೂ ಪರಸ್ಪರ ಪರಿಚಿತರು ಮತ್ತು ಅವರ ಸಂಬಂಧ  ವರ್ಷಗಳಷ್ಟು ಹಳೆಯದು. ಇಂದು ರಾಧಿಕಾ ಹಾಗೂ ಅನಂತ್‌ ಎಂಗೇಜ್ಮೆಂಟ್‌ ಕೂಡ ನೆರವೇರಿದ್ದು, ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...