alex Certify ಅಂಗಾಂಗ ದಾನಕ್ಕೆ ಪತಿಯ ಒಪ್ಪಿಗೆ ಬೇಕಿಲ್ಲ; ಹೈಕೋರ್ಟ್ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಗಾಂಗ ದಾನಕ್ಕೆ ಪತಿಯ ಒಪ್ಪಿಗೆ ಬೇಕಿಲ್ಲ; ಹೈಕೋರ್ಟ್ ಮಹತ್ವದ ಆದೇಶ

ಪ್ರಕರಣವೊಂದರ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್, ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ನೀಡಿದೆ. ಅಂಗಾಂಗ ದಾನ ಮಾಡಲು ವಿವಾಹಿತ ಮಹಿಳೆ ತನ್ನ ಪತಿಯ ಸಮ್ಮತಿ ಪಡೆಯಬೇಕಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಕರಣ: ವಿವಾಹಿತ ಮಹಿಳೆಯೊಬ್ಬರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮ ತಂದೆಗೆ ಕಿಡ್ನಿ ದಾನ ಮಾಡಲು ಮುಂದಾಗಿದ್ದರು. ಆದರೆ ಇದಕ್ಕೂ ಮುನ್ನ ಪತಿಯಿಂದ ಸಮ್ಮತಿ ಪತ್ರ ತರಬೇಕೆಂದು ಆಸ್ಪತ್ರೆ ಸಿಬ್ಬಂದಿ ಮಹಿಳೆಗೆ ಸೂಚಿಸಿದ್ದು ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿದ್ದ ಏಕಸದಸ್ಯ ಪೀಠ, ವಿವಾಹಿತ ಮಹಿಳೆ ತನ್ನ ಅಂಗಾಂಗ ದಾನ ಮಾಡಲು ಪತಿಯ ಸಮ್ಮತಿ ಪಡೆಯಬೇಕಿಲ್ಲ. ಆದರೆ ದಾನಿಯು ಮಹಿಳೆಯಾಗಿರುವ ಕಾರಣ ಅಂತಹ ಸಂದರ್ಭಗಳಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...