ಪಪ್ಪಾಯ ದೇಹದ ಆರೋಗ್ಯ ಹಾಗೂ ಸೌಂದರ್ಯ ಎರಡಕ್ಕೂ ಸಹಾಯಕಾರಿಯಾಗಿದೆ. ಪಪ್ಪಾಯ ಬಳಸಿ ಮುಖದ ಹೊಳಪನ್ನು ಮರಳಿ ಪಡೆಯುವುದು ಹೇಗೆಂದು ತಿಳಿಯಿರಿ.
ಮುಖದಲ್ಲಿ ಕಪ್ಪು ಕಲೆಯಿದ್ದರೆ ಸ್ವಲ್ಪ ಪಪ್ಪಾಯ ಪೇಸ್ಟ್, 1 ಹನಿ ನಿಂಬೆ ರಸ, ಅರ್ಧ ಚಮಚ ಜೇನು ಹಾಕಿ ಮಿಕ್ಸ್ ಮಾಡಿ ದಿನಾ ಹಚ್ಚಿ, ಕಪ್ಪು ಕಲೆ ಬೇಗನೆ ಮಾಯವಾಗುವುದು.
ಪಪ್ಪಾಯಿಗೆ ಜೇನು ಮಿಕ್ಸ್ ಮಾಡಿ ಹಚ್ಚುವುದರಿಂದ ತ್ವಚೆ ನುಣುಪಾಗುವುದು.
ಪಪ್ಪಾಯಿಗೆ ಸ್ವಲ್ಪ ಆಲೀವ್ ಎಣ್ಣೆ ಹಾಕಿ ಬೆರೆಸಿ ಮುಖಕ್ಕೆ ಹಚ್ಚಿದರೆ ಕಪ್ಪು ಕಲೆ ಇಲ್ಲವಾಗುವುದು, ಬೇಗ ನೆರಿಗೆಯೂ ಬೀಳುವುದಿಲ್ಲ.
ಹಣ್ಣಾದ ಪಪ್ಪಾಯಿಯನ್ನು ಕಿವುಚಿ ಮುಖಕ್ಕೆ ಹಚ್ಚಿದರೆ ಕೆಲವೇ ದಿನಗಳಲ್ಲಿ ಮೊಡವೆ ಸಮಸ್ಯೆ ಇಲ್ಲವಾಗುತ್ತದೆ.
ವಾರದಲ್ಲಿ 3-4 ಬಾರಿ ಪಪ್ಪಾಯಿ ಮಾಸ್ಕ್ ಹಾಕಿದರೆ ಮುಖದ ಕಾಂತಿ ಹೆಚ್ಚಿ ಹೊಳೆಯುತ್ತದೆ.