alex Certify ʼಸೆಕ್ಸ್ ಡ್ರೈವ್ʼ ಬಗ್ಗೆ ನಿಮಗೆಷ್ಟು ಗೊತ್ತು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೆಕ್ಸ್ ಡ್ರೈವ್ʼ ಬಗ್ಗೆ ನಿಮಗೆಷ್ಟು ಗೊತ್ತು…..?

ಕೆಲವರಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಇರುತ್ತದೆ. ಆದ್ರೆ ಅವ್ರ ಸಂಗಾತಿಗೆ ಲೈಂಗಿಕ ಆಸಕ್ತಿ ಹೆಚ್ಚಿರುತ್ತದೆ. ಅಂತವರಲ್ಲಿ ನೀವೂ ಒಬ್ಬರಾಗಿದ್ದರೆ ಲೈಂಗಿಕ ಜೀವನಕ್ಕೆ ಸಂಬಂಧಿಸಿದ ಕೆಲವೊಂದು ವಿಷ್ಯಗಳನ್ನು ಅಗತ್ಯವಾಗಿ ತಿಳಿದುಕೊಳ್ಳಬೇಕು. ನಿಮ್ಮದು ಯಾವ ಬಗೆಯ ಸೆಕ್ಸ್ ಡ್ರೈವ್ ಎಂಬುದನ್ನು ತಿಳಿದುಕೊಂಡಲ್ಲಿ ದಂಪತಿ ನಡುವೆ ಉತ್ತಮ ಹೊಂದಾಣಿಕೆ ಮೂಡಲು ಸಾಧ್ಯ.

ಲೈಂಗಿಕ ಅವಲಂಬನೆ : ತಮ್ಮನ್ನು ಸದಾ ಖುಷಿಯಾಗಿಟ್ಟುಕೊಳ್ಳಲು, ಒತ್ತಡ ಕಡಿಮೆ ಮಾಡಲು, ಕಚೇರಿಯಲ್ಲಾಗುವ ಕೆಟ್ಟ ಘಟನೆ ಅಥವಾ ಜಗಳವನ್ನು ಮರೆಯಲು ಸೆಕ್ಸ್ ಅವಲಂಬಿಸ್ತಾರೆ. ಶಾರೀರಿಕ ಸಂಬಂಧ ಬೆಳೆಸುವುದ್ರಿಂದ ಅವ್ರ ಒತ್ತಡ, ನೋವು ಕಡಿಮೆಯಾಗುತ್ತದೆ. ಯೋಗ, ವ್ಯಾಯಾಮ, ಜಿಮ್ ಬದಲು ಅವರು ಸೆಕ್ಸ್ ಅವಲಂಬಿಸಿರುತ್ತಾರೆ.

ಲೈಂಗಿಕತೆ ಬಗ್ಗೆ ಹಠಮಾರಿತನ : ಇಂಥವರ ಲೈಂಗಿಕ ಜೀವನ ವಿಚಿತ್ರವಾಗಿರುತ್ತದೆ. ಅವರಿಗೆ ಎಲ್ಲದರ ವಿವರವೂ ಬೇಕು. ಆದ್ರೆ ಯಾವುದ್ರಲ್ಲಿಯೂ ಸರಿಯಾಗಿ ತೃಪ್ತಿ ಸಿಗುವುದಿಲ್ಲ.

ಸಂಬಂಧ ಬೆಳೆಸುವ ವೇಳೆ ತಮ್ಮ ಬಗ್ಗೆ ಯೋಚನೆ : ಇಂಥ ವ್ಯಕ್ತಿಗಳು ಬಹಳ ಸ್ವಾರ್ಥಿಗಳಾಗಿರುತ್ತಾರೆ. ಅವರು ಕೇವಲ ತಮ್ಮ ತೃಪ್ತಿ ಬಗ್ಗೆ ಮಾತ್ರ ಯೋಚನೆ ಮಾಡ್ತಾರೆ. ಬೆಡ್ ರೂಂನಲ್ಲಿ ತಮಗಿಷ್ಟವಾಗುವ ಎಲ್ಲವೂ ಸಿಗಬೇಕು. ಅದು ನನ್ನ ಅಧಿಕಾರ ಎಂದು ಅವರು ಭಾವಿಸುತ್ತಾರೆ. ಸಂಗಾತಿ ಕೂಡ ತನಗಿಷ್ಟವಾಗುವಂತೆ ನಡೆದುಕೊಳ್ಳಬೇಕು ಎಂದು ಬಯಸುತ್ತಾರೆ. ಒಂದು ವೇಳೆ ಹಾಗಾಗದಿದ್ದಲ್ಲಿ ಅವರು ಅಸಮಾಧಾನಗೊಳ್ತಾರೆ.

ತಟಸ್ಥ ಲೈಂಗಿಕ ಜೀವನ : ಕಚೇರಿ ಕೆಲಸ, ಮನೆ ಕೆಲಸ ಸೇರಿದಂತೆ ಕೆಲಸದಲ್ಲಿ  ಬ್ಯುಸಿಯಾಗಿರುವ ಜನರು ಸದಾ ಒತ್ತಡದಲ್ಲಿರುತ್ತಾರೆ. ಅವರು ಖಿನ್ನತೆಗೊಳಗಾಗ್ತಾರೆ. ಲೈಂಗಿಕ ಜೀವನಕ್ಕೆ ಹೆಚ್ಚು ಮಹತ್ವ ನೀಡುವುದಿಲ್ಲ. ಲೈಂಗಿಕ ಜೀವನಕ್ಕಿಂತ ಬೇರೆ ಕೆಲಸಕ್ಕೆ ಮಹತ್ವ ನೀಡಿ ಇದನ್ನು ಸಂಪೂರ್ಣವಾಗಿ ಕಡೆಗಣಿಸುತ್ತಾರೆ. ಸಂಗಾತಿಯಿಂದ ದೂರವಿರಲು ಬಯಸ್ತಾರೆ.

ಭಾವನೆಗೆ ಮಹತ್ವ : ಈ ಕೆಟಗರಿ ಜನರು ಭಾವನೆಗೆ ಹೆಚ್ಚಿನ ಮಹತ್ವ ನೀಡ್ತಾರೆ. ಭಾವನಾತ್ಮಕವಾಗಿ ಸಂಬಂಧ ಬೆಳೆಸಲು ಬಯಸ್ತಾರೆ. ದೈಹಿಕ ಸಂಪರ್ಕಕ್ಕೆ ಎರಡನೇ ಸ್ಥಾನ ನೀಡ್ತಾರೆ. ಇಂಥ ಜನರು ಸೆಕ್ಸ್ ಗಾಗಿ ಸಂಗಾತಿಯನ್ನು ಒತ್ತಾಯಿಸುವುದಿಲ್ಲ. ಸಂಗಾತಿಯ ಭಾವನೆಗೆ ಮಹತ್ವ ನೀಡಿ ಅವರ ಸಂತುಷ್ಠಿ ಬಗ್ಗೆ ಯೋಚನೆ ಮಾಡ್ತಾರೆ.

ಲೈಂಗಿಕ ವ್ಯಸನಿ : ಸೆಕ್ಸ್ ವ್ಯಸನಿಗಳು ಇವರು. ಸದಾ ಸೆಕ್ಸ್ ಬಗ್ಗೆ ಯೋಚನೆ ಮಾಡ್ತಾರೆ. ಸಿಕ್ಕ ಒಂದು ಅವಕಾಶವನ್ನೂ ಅವರು ಬಿಡೋದಿಲ್ಲ. ಸಂಗಾತಿ ಆಸಕ್ತಿ, ಸಂಗಾತಿ ಆರೋಗ್ಯದ ಬಗ್ಗೆ ಇವರು ಮಹತ್ವ ನೀಡುವುದಿಲ್ಲ. ತಮ್ಮ ಬೇಡಿಕೆ ಈಡೇರಿಸದೇ ಹೋದಲ್ಲಿ ಸಂಗಾತಿ ಜೊತೆ ಜಗಳಕ್ಕಿಳಿಯುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...