ಮಾನವ ಕಳ್ಳ ಸಾಗಣೆ ಕುರಿತ ಅಧ್ಯಯನ ನಡೆಸುವ ಸಂಸ್ಥೆಯು ಹೊಸ ವರದಿಯೊಂದನ್ನು ಪ್ರಕಟಿಸಿದ್ದು ಇದರ ಪ್ರಕಾರ, ಅಮೆರಿಕದಲ್ಲಿ ಲೈಂಗಿಕ ಕಿರುಕುಳಕ್ಕೆ ಪ್ರಮುಖ ಬಳಕೆ ಮಾಡುವ ಸಾಮಾಜಿಕ ಮಾಧ್ಯಮ ಫೇಸ್ಬುಕ್ ಎಂದು ತಿಳಿದುಬಂದಿದೆ.
ಕಳೆದ ವರ್ಷ ದಾಖಲಾದ ಕೇಸುಗಳಲ್ಲಿ 59 ಪ್ರತಿಶತ ಪ್ರಕರಣಗಳಲ್ಲಿ ಫೇಸ್ಬುಕ್ ಲೈಂಗಿಕ ಪ್ರಕರಣದ ಪ್ರಮುಖ ಮಾಧ್ಯಮವಾಗಿದೆ ಅನ್ನೋದು ತಿಳಿದು ಬಂದಿದೆ.
ಮಾನವ ಕಳ್ಳಸಾಗಣೆದಾರರು ಬಲಿಪಶುಗಳನ್ನ ಹುಡುಕುವ ಪ್ರಮುಖ ಸಾಧನವಾಗಿ ಇಂಟರ್ನೆಟ್ ಮಾರ್ಪಾಡಾಗಿದೆ ಎಂದು ಮಾನವ ಕಳ್ಳಸಾಗಣೆ ಸಂಸ್ಥೆಯ ಸಿಇಓ ವಿಕ್ಟರ್ ಬೌಟ್ರೋಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ರು. ಕಳ್ಳಸಾಗಣೆದಾರರು ಲೈಂಗಿಕ ಕಿರುಕುಳದಂತಹ ಪ್ರಕರಣಗಳಲ್ಲಿ ಫೇಸ್ಬುಕ್ನಲ್ಲೇ ಹೆಚ್ಚಾಗಿ ಬಲಿಪಶುಗಳನ್ನ ಕಂಡುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
2020ನೆ ಸಾಲಿನ ಫೆಡರಲ್ ಮಾನವ ಕಳ್ಳ ಸಾಗಣೆಯ ವರದಿಯಲ್ಲಿ 94 ಪ್ರತಿಶತದಷ್ಟು ಕೇಸ್ಗಳು ಲೈಂಗಿಕ ಕಳ್ಳಸಾಣೆಗೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ.
65 ಪ್ರತಿಶತ ಅಪ್ರಾಪ್ತ ಬಲಿಪಶುಗಳು ಸೋಶಿಯಲ್ ಮೀಡಿಯಾ ಅದರಲ್ಲೂ ಮುಖ್ಯವಾಗಿ ಫೇಸ್ಬುಕ್ ಮೂಲಕವೇ ಆರೋಪಿಗಳ ಕೈಗೆ ಸಿಕ್ಕಿದ್ದಾರೆ. ಹದಿಹರೆಯದ ವಯಸ್ಸಿನಲ್ಲೇ ಫೇಸ್ಬುಕ್ ಬಳಕೆ ಈ ಅಪಾಯಕ್ಕೆ ಅಪ್ರಾಪ್ತರನ್ನ ದೂಡುತ್ತಿದೆ.
2018ರಲ್ಲಿ ಯುಟ್ಯೂಬ್, ಇನ್ಸ್ಟಾಗ್ರಾಂ ಹಾಗೂ ಸ್ನಾಪ್ಚಾಟ್ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನ ಪಡೆದುಕೊಂಡಿದ್ದವು. ಫೇಸ್ಬುಕ್ ಹದಿಹರೆಯದವರನ್ನ ಆಕರ್ಷಿಸುವಲ್ಲಿ ಈಗೀಗ ಕೊಂಚ ಹಿಂದೆ ಬಿದ್ದಿದ್ದರೂ ಸಹ ವಯಸ್ಕರಿಗಿಂತ ಅಪ್ರಾಪ್ತರವನ್ನ ಮಾನವ ಕಳ್ಳಸಾಗಣಿಕೆ ಬಳಸಿಕೊಳ್ಳಲು ಫೇಸ್ಬುಕ್ ಮುಖ್ಯ ವೇದಿಕೆಯಾಗಿ ಬದಲಾಗ್ತಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.