alex Certify ʼಸೆಕ್ಸ್ʼ ಚಿತ್ರ ನೋಡಿ ಇಂಥ ಪ್ರಯತ್ನಕ್ಕೆ ಕೈ ಹಾಕಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೆಕ್ಸ್ʼ ಚಿತ್ರ ನೋಡಿ ಇಂಥ ಪ್ರಯತ್ನಕ್ಕೆ ಕೈ ಹಾಕಬೇಡಿ

ರೀಲ್ ಹಾಗೂ ರಿಯಲ್ ಲೈಫ್ ಗೆ ತುಂಬಾ ವ್ಯತ್ಯಾಸವಿದೆ. ರೀಲ್ ನಲ್ಲಿ ತೋರಿಸಿದ್ದನ್ನೆಲ್ಲ ರಿಯಲ್ ಲೈಫ್ ನಲ್ಲಿ ಮಾಡಲು ಸಾಧ್ಯವಿಲ್ಲ. ಸೆಕ್ಸ್ ವಿಚಾರದಲ್ಲೂ ಇದು ಸತ್ಯ. ಪೋರ್ನ್ ಚಿತ್ರಗಳಲ್ಲಿ ವಿಚಿತ್ರ ದೃಶ್ಯಗಳನ್ನು ತೋರಿಸಲಾಗುತ್ತದೆ. ಇದೆಲ್ಲವೂ ನೈಜ ಜೀವನದಲ್ಲಿ ಸಾಧ್ಯವಿಲ್ಲ. ಪೋರ್ನ್ ಚಿತ್ರಗಳನ್ನು ನೋಡಿ ಅದನ್ನು ನೈಜ ಜೀವನದಲ್ಲಿ ಜಾರಿಗೆ ತರುವ ಪ್ರಯತ್ನ ಮಾಡದಿರುವುದು ಒಳ್ಳೆಯದು.

ಪೋರ್ನ್ ಚಿತ್ರಗಳಲ್ಲಿ ಕಲಾವಿದರು ಸದಾ ಸಂಭೋಗದ ಇಚ್ಛೆ ಹೊಂದಿರುವಂತೆ ತೋರಿಸಲಾಗುತ್ತದೆ. ಆದ್ರೆ ನೈಜ ಜೀವನದಲ್ಲಿ ಇದು ಸಾಧ್ಯವಿಲ್ಲ. ಪೋರ್ನ್ ಚಿತ್ರಗಳನ್ನು ನಿಮ್ಮ ಜೀವನಕ್ಕೆ ಹೋಲಿಕೆ ಮಾಡಿಕೊಳ್ಳಲು ಹೋಗಬೇಡಿ. ಹಾಗೆ ಮಾಡಿದಲ್ಲಿ ನಿಮ್ಮ ಬಗ್ಗೆ ನಿಮಗಿರುವ ವಿಶ್ವಾಸ ಕಡಿಮೆಯಾಗುತ್ತದೆ.

ಪೋರ್ನ್ ಚಿತ್ರಗಳಲ್ಲಿ ಕಲಾವಿದರ ದೇಹ ಸುಂದರವಾಗಿರುತ್ತದೆ. ದೇಹ, ಸ್ತನ ಸೇರಿದಂತೆ ಎಲ್ಲವೂ ಪರ್ಫೆಕ್ಟ್ ಆಗಿರುತ್ತದೆ. ಅವ್ರನ್ನು ನೋಡಿ ನಮ್ಮ ದೇಹ ಯಾಕೆ ಹೀಗಿಲ್ಲ ಎಂಬ ಕೀಳರಿಮೆ ಕೆಲವರನ್ನು ಕಾಡಲು ಶುರುವಾಗುತ್ತದೆ. ಆದ್ರೆ ಪೋರ್ನ್ ಚಿತ್ರದಲ್ಲಿ ತೋರಿಸುವುದೆಲ್ಲ ಸತ್ಯವಲ್ಲ ಎಂಬುದು ನಿಮಗೆ ಗೊತ್ತಿರಲಿ.

ಪ್ರತಿ ಬಾರಿಯೂ ಸೆಕ್ಸ್ ನಲ್ಲಿ ಪರಾಕಾಷ್ಠೆ ಸಿಗುತ್ತೆ ಎಂದು ನಂಬಲಾಗಿದೆ. ಇದು ಕೂಡ ಸುಳ್ಳು. ಪ್ರತಿ ಸೆಕ್ಸ್ ನಲ್ಲಿಯೂ ಪರಾಕಾಷ್ಠೆ ಸಿಗುವುದಿಲ್ಲ. ಹಾಗಂತ ನೀವು ಸೆಕ್ಸ್ ಜೀವನದಲ್ಲಿ ಸುಖವಾಗಿಲ್ಲ ಎಂದರ್ಥವಲ್ಲ.

ಪೋರ್ನ್ ಚಿತ್ರಗಳಲ್ಲಿ ಮಹಿಳಾ ನಟಿಯ ಮೌಖಿಕ ಲೈಂಗಿಕತೆಯನ್ನು ವಿಚಿತ್ರವಾಗಿ ತೋರಿಸಲಾಗುತ್ತದೆ. ನೀವೂ ನಿಮ್ಮ ಸಂಗಾತಿಗೆ ಈ ಬಗ್ಗೆ ಒತ್ತಡ ಹೇರಬೇಡಿ. ನಿಮ್ಮ ಉತ್ಸಾಹ ಸಂಗಾತಿ ಉಸಿರುಗಟ್ಟಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...