alex Certify ʼಶ್ರೀವಲ್ಲಿʼ ಹಾಡನ್ನು ಐದು ಭಾಷೆಗಳಲ್ಲಿ ಹಾಡಿದ ಗಾಯಕ: ವಿಡಿಯೋ ನೋಡಿ ಮಂತ್ರಮುಗ್ಧಗೊಂಡ ನೆಟ್ಟಿಗರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಶ್ರೀವಲ್ಲಿʼ ಹಾಡನ್ನು ಐದು ಭಾಷೆಗಳಲ್ಲಿ ಹಾಡಿದ ಗಾಯಕ: ವಿಡಿಯೋ ನೋಡಿ ಮಂತ್ರಮುಗ್ಧಗೊಂಡ ನೆಟ್ಟಿಗರು….!

Viral Video: Man Sings Pushpa's Srivalli Song in 5 Languages, Mesmerises The Internet | Watchಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಭಾರತದಲ್ಲಿ ಅಪಾರ ಯಶಸ್ಸನ್ನು ಗಳಿಸಿದೆ. ಸಿನಿಮಾದ ರೋಚಕ ಸಂಭಾಷಣೆಗಳು ಮತ್ತು ಆಕರ್ಷಕ ಹಾಡುಗಳಿಂದ ಎಲ್ಲರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಸಿನಿಮಾದ ಕ್ರೇಜ್ ಕಡಿಮೆಯಾಗುವ ಸಾಧ್ಯತೆ ಕಡಿಮೆ ಎನಿಸುತ್ತಿದೆ.

ಸಾಮಾಜಿಕ ಮಾಧ್ಯಮದ ತುಂಬಾ ಪುಷ್ಪಾ ಜ್ವರ ಆವರಿಸಿದೆ. ಜನರು ಸಿನಿಮಾದ ಹಾಡುಗಳ ಡ್ಯಾನ್ಸ್ ರೀಲ್‌ಗಳನ್ನು ರಚಿಸಿ, ಇನ್ನೂ ಹಲವರು ಅಲ್ಲು ಅರ್ಜುನ್ ಅವರ ಡೈಲಾಗ್‌ಗಳಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಈಗ, ಮತ್ತೊಂದು ವಿಡಿಯೋ ಹೊರಬಿದ್ದಿದ್ದು, ಇದರಲ್ಲಿ ವ್ಯಕ್ತಿಯೊಬ್ಬರು ಶ್ರೀವಲ್ಲಿ ಹಾಡನ್ನು ಪಂಚ ಭಾಷೆಗಳಲ್ಲಿ ಹಾಡಿದ್ದಾರೆ.

ಟ್ವಿಟ್ಟರ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಮತ್ತೆ ಹಿಂದಿ ಭಾಷೆಗಳಲ್ಲಿ ಸುಮಧುರ ಹಾಡನ್ನು ಹಾಡಿದ್ದಾರೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಈ ಹಾಡಿನ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಇದುವರೆಗೆ ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ. ಜನರು ಅವರ ಧ್ವನಿಯನ್ನು ಮೆಚ್ಚಿದ್ದು, ಅವರಿಗಿರುವ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.

— Dipanshu Kabra (@ipskabra) February 22, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...