
ಸಾಮಾಜಿಕ ಮಾಧ್ಯಮದ ತುಂಬಾ ಪುಷ್ಪಾ ಜ್ವರ ಆವರಿಸಿದೆ. ಜನರು ಸಿನಿಮಾದ ಹಾಡುಗಳ ಡ್ಯಾನ್ಸ್ ರೀಲ್‌ಗಳನ್ನು ರಚಿಸಿ, ಇನ್ನೂ ಹಲವರು ಅಲ್ಲು ಅರ್ಜುನ್ ಅವರ ಡೈಲಾಗ್‌ಗಳಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಈಗ, ಮತ್ತೊಂದು ವಿಡಿಯೋ ಹೊರಬಿದ್ದಿದ್ದು, ಇದರಲ್ಲಿ ವ್ಯಕ್ತಿಯೊಬ್ಬರು ಶ್ರೀವಲ್ಲಿ ಹಾಡನ್ನು ಪಂಚ ಭಾಷೆಗಳಲ್ಲಿ ಹಾಡಿದ್ದಾರೆ.
ಟ್ವಿಟ್ಟರ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಮತ್ತೆ ಹಿಂದಿ ಭಾಷೆಗಳಲ್ಲಿ ಸುಮಧುರ ಹಾಡನ್ನು ಹಾಡಿದ್ದಾರೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಈ ಹಾಡಿನ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಇದುವರೆಗೆ ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ. ಜನರು ಅವರ ಧ್ವನಿಯನ್ನು ಮೆಚ್ಚಿದ್ದು, ಅವರಿಗಿರುವ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.