alex Certify ʼಶಕ್ತಿಮಾನ್‌ʼನಂತೆ ಸ್ಟಂಟ್ ಮಾಡಲು ಹೋದ ಯುವಕ ಜೈಲು ಪಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಶಕ್ತಿಮಾನ್‌ʼನಂತೆ ಸ್ಟಂಟ್ ಮಾಡಲು ಹೋದ ಯುವಕ ಜೈಲು ಪಾಲು

ಅದು 90ರ ದಶಕ, ಶಕ್ತಿಮಾನ್ ಅನ್ನೋ ಇಂಡಿಯನ್ ಸೂಪರ್ ಹೀರೋ ಎಲ್ಲರ ಫೇವರೇಟ್ ಆಗಿದ್ದ. ಈಗಲೂ ಕೂಡಾ ಎಷ್ಟೋ ಜನರಿಗೆ ಶಕ್ತಿಮಾನ್ ಹ್ಯಾಂಗ್ವೋವರ್ ಇಳಿದಿಲ್ಲ. ಈಗ ಆ ಶಕ್ತಿಮಾನ್‌ನನ್ನ ಮತ್ತೆ ನೆನಪು ಮಾಡಿಕೊಳ್ಳುವಂತೆ ಮಾಡಿದ್ದು ನೋಯ್ಡಾದ ವಿಕಾಸ್‌ ಅನ್ನೋ ಯುವಕ.

ಓಡುತ್ತಿರೋ ಬೈಕ್ ಮೇಲೆ ನಿಲ್ಲೋದು, ಸ್ಟಂ ಟ್ ಮಾಡೋದು, ವಿಲ್ಹಿಂಗ್ ಮಾಡೋದು ಕಾಮನ್. ಆದರೆ ಈ ಭೂಪ ಓಡ್ತಿರೋ ಬೈಕ್ ಸೀಟ್ ಮೇಲೆ ಮಲಗುತ್ತಾ ಸಾಗಿದ್ದ. ಆತನ ಆ ಸ್ಟಂಟ್ ಶಕ್ತಿಮಾನ್ ಅನ್ನೊ ಕ್ಯಾರೆಕ್ಟರ್ ನೆನಪು ಮಾಡಿಕೊಳ್ಳುವ ಹಾಗಿತ್ತು. ಕೆಲವರು ಆತನ ಈ ಸ್ಟಂಟ್ಸ್ ನೋಡಿ ಶಾಕ್ ಆಗಿ ತಮ್ಮ ತಮ್ಮ ಮೊಬೈಲ್‌ನಲ್ಲಿರೆಕಾರ್ಡ್ ಮಾಡಿಕೊಂಡಿದ್ದರು.

ನಡುರಸ್ತೆಯಲ್ಲಿ ವಿಕಾಸ್ ಎಂಬ ಯುವಕ ಹೀಗೆ ಮಾಡ್ತಿರೋದು ಗೊತ್ತಾದ ತಕ್ಷಣವೇ ನೋಯ್ಡಾ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕೊನೆಗೂ ಈ ಮಾರ್ಡನ್ ಝಮಾನಾದ ಶಕ್ತಿಮಾನ್‌ನನ್ನ ಅರೆಸ್ಟ್ ಮಾಢಿ ಕಂಬಿ ಹಿಂದೆ ಕಳುಹಿಸಿದ್ದಾರೆ. ಆತನ ಜೊತೆ ಜೊತೆಗೆ ಈ ಬೈಕ್ ಸ್ಟಂಟ್‌ನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿರೋ ಆತನ ಗೆಳೆಯರಾದ ಗೌರವ್ ಸೂರಜ್ ಅವರನ್ನ ಸಹ ಬಂಧನ ಮಾಡಲಾಗಿದೆ.

ಈ ಕುರಿತಾಗಿ ಸೆಕ್ಟರ್ -63ನೋಯ್ಡಾ ಪೊಲೀಸರು ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಇದೇ ರೀತಿ ಸ್ಟಂಟ್ ಮಾಡಿದ ಪುಂಡರನ್ನ ಪೊಲೀಸರು ಬಂಧಿಸಿದ್ದನ್ನ ಸ್ಮರಿಸಿಕೊಳ್ಳಬಹುದಾಗಿದೆ.

— India.com (हिन्दी) (@IndiacomNews) May 27, 2022

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...