alex Certify ʼವಾಟರ್‌ ಬಾಟಲ್‌ʼ ಸ್ವಚ್ಛಗೊಳಿಸಲು ಅನುಸರಿಸಿ ಈ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಾಟರ್‌ ಬಾಟಲ್‌ʼ ಸ್ವಚ್ಛಗೊಳಿಸಲು ಅನುಸರಿಸಿ ಈ ವಿಧಾನ

ದಿನ ನಿತ್ಯ ಉಪಯೋಗಿಸುವ ವಸ್ತುಗಳಲ್ಲಿ ನೀರಿನ ಬಾಟಲ್‌ ಗಳು ಮುಖ್ಯವಾದುದು. ಸದಾ ನೀರು ಇರುವುದರಿಂದ ಅವು ಬೇಗ ಪಾಚಿ ಕಟ್ಟುತ್ತವೆ. ಕೆಲವೊಮ್ಮೆ ವಾಸನೆಯಿಂದ ಕೂಡಿರುತ್ತವೆ. ಇದನ್ನು ನಿವಾರಿಸಲು ಕೆಲ ಸುಲಭ ಕ್ರಮಗಳನ್ನು ಅನುಸರಿಸಬೇಕು.

* ಪ್ಲಾಸ್ಟಿಕ್‌ ಬಾಟಲ್‌ ಗಳನ್ನು ಸ್ವಚ್ಛಗೊಳಿಸಲು ಬಾಟಲಿಗೆ ಎರಡು ಚಮಚ ಮೌತ್‌ ಫ್ರೆಶನರ್‌ ಲಿಕ್ವಿಡ್‌ ಹಾಕಿ. ಮುಚ್ಚಳ ಮುಚ್ಚಿ ಚೆನ್ನಾಗಿ ಶೇಕ್‌ ಮಾಡಿ ಕೆಲ ನಿಮಿಷ ಬಿಡಿ. ನಂತರ ಲಿಕ್ವಿಡ್‌ ಸೋಪ್‌ ಹಾಕಿ ನೀರಿನಿಂದ ಸ್ವಚ್ಛಗೊಳಿಸಿ.

* ಬಾಟಲಿಗೆ 3 ರಿಂದ 4 ಚಮಚ ಅಕ್ಕಿ, ಒಂದು ಚಮಚ ಬೇಕಿಂಗ್‌ ಸೋಡಾ, 2 ಚಮಚ ವಿನಿಗರ್‌ ಹಾಕಿ ಚೆನ್ನಾಗಿ ಶೇಕ್‌ ಮಾಡಿ ಸ್ವಲ್ಪ ಸಮಯ ಬಿಟ್ಟು ಲಿಕ್ವಿಡ್‌ ಸೋಪ್‌ ಹಾಕಿ ನೀರಿನಿಂದ ಕ್ಲೀನ್‌ ಮಾಡಿ. ಇದರಿಂದ ಬಾಟಲಿನ ವಾಸನೆ ಹೋಗುತ್ತದೆ.

* ಬಾಟಲಿಗೆ ಎಂಟರಿಂದ ಒಂಬತ್ತು ಐಸ್‌ ಕ್ಯೂಬ್‌, 3 ರಿಂದ 4 ಚಮಚ ಪುಡಿ ಉಪ್ಪು ಹಾಕಿ ನಂತರ ಅದಕ್ಕೆ ಕತ್ತರಿಸಿದ ನಿಂಬೆ ತುಂಡುಗಳನ್ನು ಹಾಕಿ ಚೆನ್ನಾಗಿ ಶೇಕ್‌ ಮಾಡಿ ಸ್ವಲ್ಪ ಸಮಯ ಬಿಡಿ ನಂತರ ಸ್ವಚ್ಛಗೊಳಿಸಿ.

* ಬಾಟಲಿಗಳ ಮುಚ್ಚಳಗಳು ಕಲೆಯಾಗಿದ್ದರೆ, ಅವುಗಳ ಒಳಗೆ ಕೊಳೆ ಕೂತಿದ್ದರೆ, ಅವುಗಳನ್ನು ಲಿಕ್ವಿಡ್‌ ಸೋಪ್‌ ನಲ್ಲಿ ಚೆನ್ನಾಗಿ ನೆನೆಸಿ ನಂತರ ಹಳೆಯ ಟೂತ್‌ ಬ್ರೆಷ್‌ ಅಥವಾ ಚಿಕ್ಕ ಪಾತ್ರೆ ತೊಳೆಯುವ ಸ್ಕ್ರಬ್‌ನಿಂದ ಉಜ್ಜಿ ಸ್ವಚ್ಚಗೊಳಿಸಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...