alex Certify ʼಮೊಬೈಲ್‌ʼ ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಗೊತ್ತಾ…..? ಇದನ್ನು ತಪ್ಪಿಸಲು ಇಲ್ಲಿದೆ ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮೊಬೈಲ್‌ʼ ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಗೊತ್ತಾ…..? ಇದನ್ನು ತಪ್ಪಿಸಲು ಇಲ್ಲಿದೆ ಟಿಪ್ಸ್‌

ಸ್ಮಾರ್ಟ್‌ಫೋನ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳೋದು ಹೊಸದೇನಲ್ಲ. ಆದ್ರೆ ಕಳೆದ ಒಂದು ತಿಂಗಳಿನಿಂದೀಚೆಗೆ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ. ಇದ್ದಕ್ಕಿದ್ದಂತೆ ಮೊಬೈಲ್‌ ಸ್ಫೋಟಗೊಂಡು ಬೆಂಕಿಗೆ ಆಹುತಿಯಾಗುತ್ತದೆ. ಆ ಸಮಯದಲ್ಲಿ ಮೊಬೈಲ್‌ ನಿಮ್ಮ ಕೈಯ್ಯಲ್ಲಿ, ಜೇಬಿನಲ್ಲಿ ಇದ್ದರೆ ನಿಮಗೂ ಅಪಾಯವಾಗಬಹುದು.

ಸ್ಮಾರ್ಟ್‌ಫೋನ್‌ಗೆ ಬೆಂಕಿ ತಗುಲಲು ಐದು ಪ್ರಮುಖ ಕಾರಣಳಿವೆ. ಅವು ಯಾವುವು ? ಬೆಂಕಿ ತಗುಲದಂತೆ ತಡೆಯಲು ಏನು ಮಾಡಬಹುದು ಅನ್ನೋದನ್ನು ನೋಡೋಣ.

ನಿಮ್ಮ ಸ್ಮಾರ್ಟ್‌ಫೋನ್‌ಗೆ ನೇರವಾಗಿ ಶಾಖ ತಗುಲದಂತೆ ನೋಡಿಕೊಳ್ಳಬೇಕು. ಬಹಳ ಸಮಯದವರೆಗೆ ಬಿಸಿಯಾದ ಸ್ಥಳದಲ್ಲಿ ಫೋನ್‌ ಇಟ್ಟರೆ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ.

ನಮ್ಮಲ್ಲಿ ಹಲವರು ರಾತ್ರಿ ಮಲಗುವಾಗ ಪಕ್ಕದಲ್ಲೇ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್‌ಗೆ ಹಾಕಿರ್ತಾರೆ. ರಾತ್ರಿಯಿಡೀ ಫೋನ್ ಅನ್ನು ಚಾರ್ಜಿಂಗ್‌ಗೆ ಇರಿಸುವುದರಿಂದ ಬ್ಯಾಟರಿ ಹೆಚ್ಚು ಬಿಸಿಯಾಗುತ್ತದೆ ಅದರಿಂದ್ಲೇ ಬೆಂಕಿ ಹೊತ್ತಿಕೊಳ್ಳುವ ಅಪಾಯವಿರುತ್ತದೆ.

ಸ್ಮಾರ್ಟ್‌ಫೋನ್‌ಗಳನ್ನು ಕೈಯ್ಯಲ್ಲಿ ಅಥವಾ ಬ್ಯಾಗಿನಲ್ಲಿ, ಜೇಬಿನಲ್ಲಿ ಭದ್ರವಾಗಿಟ್ಟುಕೊಳ್ಳಿ. ಪದೇ ಪದೇ ಮೊಬೈಲ್‌ ಕೈತಪ್ಪಿ ಕೆಳಕ್ಕೆ ಬೀಳ್ತಾ ಇದ್ರೆ ಅದರಿಂದ ಫೋನ್‌ನ ಬ್ಯಾಟರಿಗೆ ಹಾನಿಯಾಗುತ್ತದೆ. ಇದೇ ಕಾರಣಕ್ಕೆ ಮೊಬೈಲ್‌ ಬ್ಲಾಸ್ಟ್‌ ಕೂಡ ಆಗಬಹುದು.

ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಏಕಕಾಲದಲ್ಲಿ ಅನೇಕ ಕೆಲಸಗಳನ್ನು ಮಾಡಬಹುದು. ಆದ್ರೆ ಗೇಮಿಂಗ್ ಮತ್ತು ಮಲ್ಟಿ ಟಾಸ್ಕಿಂಗ್‌ನಿಂದಾಗಿ, ಫೋನ್‌ನ ಪ್ರೊಸೆಸರ್ ಬೇಗನೆ ಬಿಸಿಯಾಗುತ್ತದೆ. ಇದರಿಂದ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮನುಷ್ಯರ ರೀತಿಯಲ್ಲೇ ಸ್ಮಾರ್ಟ್‌ಫೋನ್‌ಗೂ ವಿಶ್ರಾಂತಿಯ ಅಗತ್ಯವಿದೆ.

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಅದೇ ಕಂಪನಿಯ ಚಾರ್ಜರ್ ಅನ್ನು ಬಳಸಿ. ಬೇರೆ ಯಾವುದೋ ಕಳಪೆ ಚಾರ್ಜರ್‌ ಬಳಸುವುದರಿಂದ್ಲೂ ಫೋನ್‌ನ ಬ್ಯಾಟರಿ ಹಾಳಾಗುತ್ತದೆ. ಇದರಿಂದಲೂ ಮೊಬೈಲ್‌ಗೆ ಬೆಂಕಿ ಹೊತ್ತಿಕೊಳ್ಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...