alex Certify ʼಮೊಡವೆʼ ಸಮಸ್ಯೆಗೆ ಇಲ್ಲಿದೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮೊಡವೆʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಮೊಡವೆ ಸಮಸ್ಯೆ ಹರೆಯದಲ್ಲಿ ಬಹುತೇಕರನ್ನು ಕಾಡುತ್ತದೆ. ಒತ್ತಡ, ಹಾರ್ಮೋನ್ ಸಮಸ್ಯೆ, ಔಷಧಗಳ ಅಡ್ಡ ಪರಿಣಾಮ ಸೇರಿದಂತೆ ಇನ್ನೂ ಹಲವು ಕಾರಣಗಳಿಂದ ಉಂಟಾಗುವ ಮೊಡವೆಗಳ ಕಲೆಗಳು ಉಳಿಯುವ ಸಾಧ್ಯತೆ ಇದೆ.

ಆದ್ದರಿಂದ ಹಲವರು ಮೊಡವೆಗಳ ನಿವಾರಣೆಗೆ ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ. ಅವುಗಳು ತಾತ್ಕಾಲಿಕ ಪರಿಹಾರ ನೀಡಿದರೂ ಸಮಸ್ಯೆಯನ್ನು ನಿವಾರಿಸುವುದಿಲ್ಲ. ಆದ್ದರಿಂದ ಮನೆಮದ್ದನ್ನು ಟ್ರೈಮಾಡಿ. ಪರಿಣಾಮ ನಿಧಾನವಾದರೂ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ.

* ಪ್ರತಿದಿನ ಕನಿಷ್ಠ ಎರಡರಿಂದ ಮೂರು ಲೀಟರ್ ನಷ್ಟು ನೀರು ಕುಡಿಯಬೇಕು.

* ಪ್ರತಿದಿನ ತಪ್ಪದೆ ಆರರಿಂದ ಎಂಟು ಬಾರಿ ಮುಖವನ್ನು ಶುದ್ಧ ನೀರಿನಲ್ಲಿ ತೊಳೆಯಬೇಕು.

* ಹಣ್ಣು, ಸೊಪ್ಪು ಮತ್ತು ತರಕಾರಿಗಳನ್ನು ಯಥೇಚ್ಛವಾಗಿ ಬಳಸಬೇಕು.

* ಪುದೀನಾ ಎಲೆಯ ರಸವನ್ನು ಮುಖಕ್ಕೆ ಲೇಪನ ಮಾಡಿ 20 ನಿಮಿಷಗಳ ನಂತರ ಉಗುರು ಬೆಚ್ಚನೆಯ ನೀರಿನಿಂದ ಮುಖವನ್ನು ತೊಳೆಯಬೇಕು.

* ಅರಿಶಿಣ ಪುಡಿ, ಪಪ್ಪಾಯ ಹಣ್ಣು, ಸವತೆಕಾಯಿ, ಕ್ಯಾರೆಟ್, ಟೊಮೆಟೊ, ಜೇನುತುಪ್ಪ ಇವುಗಳ ಫೇಸ್ ಪ್ಯಾಕ್ ಬಳಸಬೇಕು.

* ಆಲೀವ್ ಎಣ್ಣೆಯನ್ನು ಮುಖಕ್ಕೆ ಮರ್ದನ ಮಾಡಿ 20 ನಿಮಿಷಗಳ ನಂತರ ಮುಖಕ್ಕೆ ಹಬೆಯನ್ನು ತೆಗೆದುಕೊಳ್ಳುವುದರಿಂದ ಮೊಡವೆಗಳು ನಿವಾರಣೆಯಾಗುತ್ತವೆ.

* ಕಲ್ಲಂಗಡಿ ರಸ, ಕ್ಯಾರೆಟ್ ರಸ, ಬಾಳೆ ಹಣ್ಣಿನ ರಸವನ್ನು ಐಸ್ ಮಾಡುವ ಟ್ರೇ ನಲ್ಲಿ ಇರಿಸಿ ಐಸ್ ಕ್ಯೂಬ್ ಮಾಡಿಕೊಳ್ಳಬೇಕು. ಈ ಹಣ್ಣಿನ ರಸದ ಐಸ್ ಕ್ಯೂಬ್ ನಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ಮೊಡವೆ ನಿಯಂತ್ರಣದಲ್ಲಿರುತ್ತದೆ.

* ನಿಂಬೆ ರಸ ಅಥವಾ ಜೇನುತುಪ್ಪ ಅಥವಾ ಮೊಟ್ಟೆಯ ಬಿಳಿ ಭಾಗವನ್ನು ಮುಖಕ್ಕೆ ಲೇಪನ ಮಾಡಿ 20 ನಿಮಿಷಗಳ ನಂತರ ಬೆಚ್ಚನೆಯ ನೀರಿನಲ್ಲಿ ತೊಳೆಯಬೇಕು.

* ಚಂದನ ಪುಡಿಯನ್ನು ಗುಲಾಬಿ ನೀರಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ತೆಳುವಾಗಿ ಲೇಪನ ಮಾಡಿ ಬೆಳಗ್ಗೆ ಎದ್ದು ಮುಖವನ್ನು ತಣ್ಣೀರಿನಿಂದ ತೊಳೆಯಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...