alex Certify ಮೊಟ್ಟೆ ಸಿಪ್ಪೆ ಎಸೆಯುವ ಮುನ್ನ ಯೋಚಿಸಿ….! ಇಲ್ಲಿದೆ ಇದರಿಂದಾಗುವ ಅನೇಕ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಟ್ಟೆ ಸಿಪ್ಪೆ ಎಸೆಯುವ ಮುನ್ನ ಯೋಚಿಸಿ….! ಇಲ್ಲಿದೆ ಇದರಿಂದಾಗುವ ಅನೇಕ ಪ್ರಯೋಜನ

ಮೊಟ್ಟೆ ಒಡೆದಾಗ ಮರು ಯೋಚಿಸದೆ ಅದರ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಅದೇ ಸಿಪ್ಪೆಯನ್ನು ಸೌಂದರ್ಯವರ್ಧಕವಾಗಿ ಬಳಸಬಹುದು. ಹೇಗೆ ಅಂತ ನೋಡಿ.

* ಮೊಟ್ಟೆಯ ಸಿಪ್ಪೆಯನ್ನು ಬಳಸುವುದರಿಂದ ಚರ್ಮದ ರಂಧ್ರಗಳು ತೆರೆದುಕೊಂಡು ಚರ್ಮವು ಸ್ವಚ್ಛವಾಗುತ್ತದೆ. ಮೊಟ್ಟೆಯ ಸಿಪ್ಪೆಯನ್ನು ಪುಡಿ ಮಾಡಿಕೊಂಡು, ಸ್ವಲ್ಪ ನಿಂಬೆ ರಸ ಹಾಗೂ ಜೇನುತುಪ್ಪದೊಂದಿಗೆ ಬೆರೆಸಿಕೊಂಡು ಪೇಸ್ಟ್ ಮಾಡಿಕೊಳ್ಳಬೇಕು. ಇದನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತೊಳೆಯಬೇಕು. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ ಬಳಿಕ ಶಿವರಾಂ ಅಂತ್ಯಕ್ರಿಯೆ

* ಮೊಟ್ಟೆಯ ಸಿಪ್ಪೆಯಲ್ಲಿ ಇರುವಂತಹ ನೈಸರ್ಗಿಕ ಪ್ರೊಟೀನ್ ಮತ್ತು ವಿಟಮಿನ್ ಗಳು ತ್ವಚೆಗೆ ಯೌವ್ವನ ನೀಡುವುದಲ್ಲದೆ ಹೊಳೆಯುವಂತೆ ಮಾಡುತ್ತದೆ. ಎರಡು ಚಮಚ ಮೊಟ್ಟೆ ಸಿಪ್ಪೆಯ ಪುಡಿಗೆ ಜೇನುತುಪ್ಪ ಮತ್ತು ಸ್ವಲ್ಪ ಕಡಲೆಹಿಟ್ಟು ಹಾಕಿ ಬೆರೆಸಿಕೊಳ್ಳಬೇಕು. ಇದನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ಮುಖ ತೊಳೆಯಬೇಕು. ವಾರದಲ್ಲಿ ಎರಡರಿಂದ ಮೂರು ಸಲ ಈ ರೀತಿ ಮಾಡಿದರೆ ತ್ವಚೆ ಕಾಂತಿಯುತವಾಗುತ್ತದೆ.

* ಮೊಟ್ಟೆಯ ಸಿಪ್ಪೆ ತ್ವಚೆಯನ್ನು ಆಳವಾಗಿ ಸ್ವಚ್ಛ ಮಾಡುತ್ತದೆ. ಇದರ ಫೇಸ್ ಪ್ಯಾಕ್ ನಿಂದ ಚರ್ಮದ ರಂಧ್ರದಲ್ಲಿ ಸೇರಿರುವಂತಹ ಧೂಳು ಹಾಗೂ ಇತರ ಕಲ್ಮಶಗಳನ್ನು ಹೊರ ಹೋಗುತ್ತದೆ. ಹಾಗೇ ಮೊಡವೆಗಳು ಬರದಂತೆ ತಡೆಯುತ್ತದೆ.

* ಮೊಟ್ಟೆಯ ಸಿಪ್ಪೆ ಪುಡಿಗೆ ಲಿಂಬೆರಸ ಮತ್ತು ಇದ್ದಿಲಿನ ಪುಡಿಯನ್ನು ಹಾಕಿ ಕಲಸಬೇಕು. ಆನಂತರ ಮುಖಕ್ಕೆ ಹಚ್ಚಿಕೊಂಡು ಸುಮಾರು 30 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು. ಮೊಟ್ಟೆಯ ಚಿಪ್ಪಿನಲ್ಲಿ ಇರುವಂತಹ ಬ್ಲೀಚಿಂಗ್ ತ್ವಚೆಗೆ ನೈಸರ್ಗಿಕ ಕಾಂತಿ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...