alex Certify ʼಮಾತಾ ವೈಷ್ಣೋದೇವಿʼ ದರ್ಶನಕ್ಕೆ ತೆರಳುವವರು ಮಿಸ್‌ ಮಾಡದೆ ಓದಿ ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಾತಾ ವೈಷ್ಣೋದೇವಿʼ ದರ್ಶನಕ್ಕೆ ತೆರಳುವವರು ಮಿಸ್‌ ಮಾಡದೆ ಓದಿ ಈ ಸುದ್ದಿ

ಚಾಪರ್​ ಬುಕ್ಕಿಂಗ್​ ಟಿಕೆಟ್​ ನೀಡುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದ ನಕಲಿ ವೆಬ್​ಸೈಟ್​ಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸ್​ ಸೈಬರ್​ ಇಲಾಖೆಗೆ ಶ್ರೀಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯು ದೂರನ್ನು ನೀಡಿದೆ.

ಈ ವಿಚಾರವಾಗಿ ಮಾತನಾಡಿದ ಶ್ರೀಮಾತಾ ವೈಷ್ಣೋದೇವಿ ದೇಗುಲ ಮಂಡಳಿಯ ಸಿಇಓ ರಮೇಶ್​ ಕುಮಾರ್​, ನಕಲಿ ಹೆಲಿಕಾಪ್ಟರ್​ ಟಿಕೆಟ್​ ಬುಕ್ಕಿಂಗ್​ ವೆಬ್​ಸೈಟ್​ಗಳ ಬಗ್ಗೆ ಯಾತ್ರಾರ್ಥಿಗಳಿಂದ ಸಾಕಷ್ಟು ದೂರುಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದರು.

ಭಕ್ತರು ನಮಗೆ ಈ ನಕಲಿ ವೆಬ್​ಸೈಟ್​ಗಳ ವಂಚನೆ ಬಗ್ಗೆ ದೂರು ನೀಡಿದ್ದಾರೆ. ನಾವು ಭಕ್ತರ ಬಳಿ ಇಂತಹ ಮೋಸದ ಜಾಲಕ್ಕೆ ಬೀಳದಂತೆ ಮನವಿ ಮಾಡಿದ್ದೇವೆ. ಅಧಿಕೃತ ವೆಬ್​ಸೈಟ್​ಗಳು ಅಥವಾ ಮೊಬೈಲ್​ ಆ್ಯಪ್​ಗಳ ಮೂಲಕವೇ ಬುಕ್ಕಿಂಗ್​ ಮಾಡಿ ಎಂದು ಹೇಳಿದ್ದೇವೆ ಎಂದು ಕುಮಾರ್​ ಹೇಳಿದ್ರು.

ಇಂತಹ ವೆಬ್​ಸೈಟ್​ಗಳನ್ನು ಬ್ಲಾಕ್​ ಮಾಡುವಂತೆ ಗೂಗಲ್​ಗೂ ಪತ್ರ ಬರೆದಿದ್ದೇವೆ. ಅಲ್ಲದೇ ಜಮ್ಮು & ಕಾಶ್ಮೀರ ಠಾಣೆಯಲ್ಲಿ ಎಫ್​ಐಆರ್​ನ್ನೂ ದಾಖಲಿಸಿದ್ದೇವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಭಕ್ತರ ಬಳಿ ಇಂತಹ ಮೋಸದ ಜಾಲಕ್ಕೆ ಬೀಳದಂತೆ ಮನವಿ ಮಾಡುತ್ತಿದ್ದೇನೆ ಎಂದು ಕುಮಾರ್​ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...