alex Certify ʼಮಹಿಳಾ ದಿನಾಚರಣೆʼ ಯಂದು ತಾನು ಮಾಡಿದ ಯಡವಟ್ಟಿಗೆ ಕ್ಷಮೆಯಾಚಿಸಿದ ಫ್ಲಿಪ್​ಕಾರ್ಟ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಹಿಳಾ ದಿನಾಚರಣೆʼ ಯಂದು ತಾನು ಮಾಡಿದ ಯಡವಟ್ಟಿಗೆ ಕ್ಷಮೆಯಾಚಿಸಿದ ಫ್ಲಿಪ್​ಕಾರ್ಟ್​..!

ಅಂತಾರಾಷ್ಟ್ರೀಯ ಮಹಿಳಾ ದಿನದಂದು ಇ ಕಾಮರ್ಸ್​ ಫ್ಲಾಟ್​ಫಾರಂ ತನ್ನ ಅಡುಗೆ ಉಪಕರಣಗಳನ್ನು ಪ್ರಚಾರ ಮಾಡಲು ಹೋಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಬಳಿಕ ಇಂದು ತಾನು ಮಾಡಿದ ತಪ್ಪಿಗೆ ಸೋಶಿಯಲ್​ ಮೀಡಿಯಾದಲ್ಲಿ ಫ್ಲಿಪ್​ಕಾರ್ಟ್ ಕ್ಷಮೆಯಾಚಿಸಿದೆ.

ನಿನ್ನೆ ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಫ್ಲಿಪ್​ಕಾರ್ಟ್​, ಆತ್ಮೀಯ ಗ್ರಾಹಕರೇ….. ಈ ಮಹಿಳಾ ದಿನಾಚರಣೆಯನ್ನು ನಾವು ಆಚರಿಸೋಣ, 299 ರೂಪಾಯಿಗಳಿಂದ ನಿಮ್ಮ ಅಡುಗೆ ಉಪಕರಣಗಳನ್ನು ಖರೀದಿ ಮಾಡಿ ಎಂದು ಸಂದೇಶವನ್ನು ಶೇರ್​ ಮಾಡಿತ್ತು. ಆದರೆ ಇದು ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತಗೊಳಿಸುವಂತಿದೆ ಎಂದು ಅನೇಕರು ಜಾಹೀರಾತಿನ ವಿರುದ್ಧ ಅಪಸ್ವರವನ್ನು ತೆಗೆದಿದ್ದರು.

ಸೋಶಿಯಲ್​ ಮೀಡಿಯಾದಲ್ಲಿ ಫ್ಲಿಪ್​ಕಾರ್ಟ್ ವಿರುದ್ಧ ಸಂದೇಶಗಳು ಹೆಚ್ಚುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಫ್ಲಿಪ್​ಕಾರ್ಟ್ ಇಂದು ಟ್ವಿಟರ್​ನಲ್ಲಿ ಕ್ಷಮೆಯಾಚಿಸಿದೆ.

ನಾವು ತಪ್ಪು ಮಾಡಿದ್ದೇವೆ ಕ್ಷಮಿಸಿ. ಯಾರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಹೀಗಾಗಿ ನಾವು ಮಹಿಳಾ ದಿನದಂದು ಶುಭಾಶಯ ಕೋರಿದ ರೀತಿಗೆ ಕ್ಷಮೆ ಯಾಚಿಸುತ್ತಿದ್ದೇವೆ ಎಂದು ಬರೆದುಕೊಂಡಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...