alex Certify ʼಬ್ಯಾಂಕ್ ಲಾಕರ್ʼ ತೆಗೆದುಕೊಳ್ಳುವ ಯೋಚನೆಯಲ್ಲಿದ್ರೆ ಇದನ್ನೊಮ್ಮೆ ಓದಲೇಬೇಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬ್ಯಾಂಕ್ ಲಾಕರ್ʼ ತೆಗೆದುಕೊಳ್ಳುವ ಯೋಚನೆಯಲ್ಲಿದ್ರೆ ಇದನ್ನೊಮ್ಮೆ ಓದಲೇಬೇಕು

ನೀವೇನಾದ್ರೂ ಬ್ಯಾಂಕ್ ಲಾಕರ್ ತೆಗೆದುಕೊಳ್ಳುವ ಯೋಚನೆಯಲ್ಲಿದ್ರೆ ಇದನ್ನೊಮ್ಮೆ ಓದಲೇಬೇಕು. ಬ್ಯಾಂಕ್‌ ಲಾಕರ್‌ ತೆಗೆದುಕೊಳ್ಳಲು ಬಹಳ ಖರ್ಚಾಗುತ್ತದೆ ಅನ್ನೋ ಭಾವನೆ ಬಹುತೇಕರಲ್ಲಿದೆ. ಆದರೆ ವಾಸ್ತವ ಸ್ಥಿತಿಯೇ ಬೇರೆ. ಲಾಕರ್‌ಗೆ ಬ್ಯಾಂಕ್‌ಗಳು ವಿಧಿಸುವ ವೆಚ್ಚ ಅವುಗಳ ಗಾತ್ರವನ್ನು ಅವಲಂಬಿಸಿರುತ್ತದೆ.

ಹೆಚ್ಚಿನವರು ಚಿನ್ನಾಭರಣ, ಬೆಲೆಬಾಳುವ ವಸ್ತುಗಳು ಮತ್ತು ಅಗತ್ಯ ದಾಖಲೆಗಳನ್ನು ಭದ್ರತೆಯ ದೃಷ್ಟಿಯಿಂದ ಬ್ಯಾಂಕ್ ಲಾಕರ್‌ನಲ್ಲಿ ಇಡುತ್ತಾರೆ. ಈ ಸೇವೆಗಾಗಿ, ಲಾಕರ್‌ ಗಾತ್ರಕ್ಕೆ ಅನುಗುಣವಾಗಿ ಬ್ಯಾಂಕ್‌ಗಳು ಶುಲ್ಕ ವಿಧಿಸುತ್ತವೆ. ಕೆಲವು ಬ್ಯಾಂಕ್‌ಗಳು ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ ಆಧಾರದ ಮೇಲೆ ಗ್ರಾಹಕರಿಗೆ ಲಾಕರ್‌ಗಳನ್ನು ನೀಡುತ್ತವೆ.

ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಲಾಕರ್‌ಗಳ ಶುಲ್ಕ ಬೇರೆ ಬೇರೆ ತೆರನಾಗಿದೆ. ಗಾತ್ರ ಮತ್ತು ನಗರವನ್ನು ಕೂಡ ಇದು ಅವಲಂಬಿಸಿರುತ್ತದೆ. ಎಸ್‌.ಬಿ.ಐ. ಲಾಕರ್‌ಗಳು 500 ರೂಪಾಯಿಯಿಂದ ಆರಂಭವಾಗಿ 3,000 ರೂಪಾಯಿವರೆಗೆ ಲಭ್ಯವಿವೆ. ಸಣ್ಣ, ಮಧ್ಯಮ ಗಾತ್ರದ ಮತ್ತು ದೊಡ್ಡ ಗಾತ್ರದ ಲಾಕರ್‌ಗಳಿಗೆ ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ಕ್ರಮವಾಗಿ 2 ಸಾವಿರ, 4 ಸಾವಿರ, 8 ಸಾವಿರ ಮತ್ತು 12 ಸಾವಿರ ಶುಲ್ಕ ವಿಧಿಸಲಾಗುತ್ತದೆ.

ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ, ಮಧ್ಯಮ ಗಾತ್ರದ, ದೊಡ್ಡ ಮತ್ತು ಹೆಚ್ಚುವರಿ ದೊಡ್ಡ ಲಾಕರ್‌ಗಳಿಗೆ ಬ್ಯಾಂಕ್ ಕ್ರಮವಾಗಿ 1500, 3000, 6000 ಮತ್ತು 9000 ರೂಪಾಯಿ ಶುಲ್ಕ ವಿಧಿಸುತ್ತದೆ. ಐಸಿಐಸಿಐ ಬ್ಯಾಂಕ್ ಒಂದು ವರ್ಷ ಮುಂಚಿತವಾಗಿ ಲಾಕರ್ ಬಾಡಿಗೆಯನ್ನು ವಿಧಿಸುತ್ತದೆ. ICICI ನಲ್ಲಿ ಲಾಕರ್ ತೆರೆಯಲು, ನೀವು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.

ಬ್ಯಾಂಕಿನಲ್ಲಿ ಸಣ್ಣ ಗಾತ್ರದ ಲಾಕರ್‌ಗೆ 1,200 ರಿಂದ 5,000 ರೂಪಾಯಿ ಇದೆ. ದೊಡ್ಡ ಲಾಕರ್‌ಗೆ 10 ಸಾವಿರದಿಂದ 22 ಸಾವಿರ ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಜೊತೆಗೆ ಜಿಎಸ್‌ಟಿಯನ್ನು ಕೂಡ ಗ್ರಾಹಕರು ಪ್ರತ್ಯೇಕವಾಗಿ ಪಾವತಿಸಬೇಕು. ನೀವು PNBನಲ್ಲಿ ಲಾಕರ್ ತೆಗೆದುಕೊಂಡರೆ ವರ್ಷದಲ್ಲಿ 12 ಬಾರಿ ಉಚಿತವಾಗಿ ಭೇಟಿ ಮಾಡಬಹುದು. ಹೆಚ್ಚುವರಿ ಭೇಟಿಗಳಿಗಾಗಿ ನೀವು 100 ರೂಪಾಯಿ ಪಾವತಿಸಬೇಕಾಗುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ಲಾಕರ್‌ನ ವಾರ್ಷಿಕ ಬಾಡಿಗೆ 1250 ರೂಪಾಯಿಯಿಂದ 10,000 ರೂಪಾಯಿವರೆಗೂ ಇದೆ. ನಗರ ಮತ್ತು ಮೆಟ್ರೋ ನಗರಗಳಿಗೆ ಈ ಶುಲ್ಕ 2 ಸಾವಿರದಿಂದ 10 ಸಾವಿರ ರೂಪಾಯಿವರೆಗೂ ಇರುತ್ತದೆ. ನೀವು ಆಕ್ಸಿಸ್ ಬ್ಯಾಂಕ್‌ನಲ್ಲಿ ಒಂದು ತಿಂಗಳಲ್ಲಿ ಮೂರು ಬಾರಿ ಉಚಿತ ಭೇಟಿ ಮಾಡಬಹುದು. ಲಾಕರ್ ಶುಲ್ಕಗಳು ಮೆಟ್ರೋ ಅಥವಾ ನಗರ ಪ್ರದೇಶದ ಶಾಖೆಯಲ್ಲಿ 2,700 ರೂಪಾಯಿಯಿಂದ ಪ್ರಾರಂಭವಾಗುತ್ತವೆ. ಮಧ್ಯಮ ಗಾತ್ರದ ಲಾಕರ್‌ಗೆ ಶುಲ್ಕ 6,000 ರೂಪಾಯಿ ಇದ್ದು, ದೊಡ್ಡ ಗಾತ್ರದ ಲಾಖರ್‌ಗೆ 10,800 ರಿಂದ 12,960 ರೂಪಾಯಿ ವಿಧಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...