alex Certify ʼಬಿಗ್‌ ಬಿʼ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ಕೋರಿದ್ದ ವ್ಯಕ್ತಿಗೆ ಬರೋಬ್ಬರಿ 10 ಲಕ್ಷ ರೂ. ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಿಗ್‌ ಬಿʼ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ಕೋರಿದ್ದ ವ್ಯಕ್ತಿಗೆ ಬರೋಬ್ಬರಿ 10 ಲಕ್ಷ ರೂ. ದಂಡ

ಅಮಿತಾಭ್​ ಬಚ್ಚನ್​ ಅಭಿನಯದ ಜುಂಡ್​ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯು ಅರ್ಜಿಯಲ್ಲಿ ಕೆಲವು ಮಾಹಿತಿಗಳನ್ನು ಮುಚ್ಚಿಟ್ಟಿದ್ದಕ್ಕಾಗಿ ಪ್ರಧಾನಿ ಮಂತ್ರಿ ಕೋವಿಡ್​ 19 ಫಂಡ್​ಗೆ 10 ಲಕ್ಷ ರೂಪಾಯಿ ಹಣವನ್ನು ಜಮೆ ಮಾಡುವಂತೆ ತೆಲಂಗಾಣ ಹೈಕೋರ್ಟ್ ಆದೇಶ ನೀಡಿದೆ.

ಅರ್ಜಿದಾರರಾದ ನಂದಿ ಚಿನ್ನಿ ಕುಮಾರ್​ ಗುರುವಾರದಂದು ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಈ ಸಿನಿಮಾವು ಫುಟ್ಬಾಲ್​ ಆಟಗಾರ ಅಖಿಲೇಶ್​ ಪಾಲ್​ ಜೀವನವನ್ನಾಧರಿಸಿದೆ. ಅಲ್ಲದೇ ತಾನು ಈ ಚಲನಚಿತ್ರವನ್ನು ನಿರ್ಮಾಣ ಮಾಡಲು 2017ರಲ್ಲಿ ಕಥೆಯ ಹಕ್ಕನ್ನು ಪಡೆದುಕೊಂಡಿದ್ದೇನೆ ಎಂದು ವಾದಿಸಿದ್ದರು. ಜುಂಡ್​ ಸಿನಿಮಾ ಕೂಡ ಇದೇ ಕಥಾಹಂದರವನ್ನು ಹೊಂದಿದೆ ಎಂದು ಹೇಳಿದ್ದರು.

ಆದರೆ ವಿಚಾರಣಾ ನ್ಯಾಯಾಲಯದ ಮುಂದೆ ಚಿನ್ನಿ ಕುಮಾರ್​ ಅನೇಕ ವಿಚಾರಗಳನ್ನು ಮುಚ್ಚಿಟ್ಟಿದ್ದಾರೆ ಎಂಬ ಕಾರಣಕ್ಕೆ ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಿದೆ. ಅರ್ಜಿದಾರ ನಿರ್ಮಾಪಕರೊಂದಿಗೆ ರಾಜಿ ಮಾಡಿಕೊಂಡ ಬಳಿಕ 5 ಕೋಟಿ ರೂಪಾಯಿ ಮೊತ್ತವನ್ನು ಪಡೆದುಕೊಂಡಿದ್ದಾರೆ. ಆದರೆ ಈಗ ಅವರು ನಿರ್ಮಾಪಕರ ಹಾದಿಯನ್ನು ತಪ್ಪಿಸಿದ್ದಾರೆ ಎಂದು ಕೋರ್ಟ್ ಹೇಳಿದೆ.

ಈ ಆಧಾರದ ಮೇಲೆ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ, ಹಾಗೂ ಅರ್ಜಿದಾರ ಚಿನ್ನಿ ಕುಮಾರ್​ಗೆ 10 ಲಕ್ಷ ರೂಪಾಯಿ ಹಣವನ್ನು ಮೂವತ್ತು ದಿನಗಳಲ್ಲಿ ಪ್ರಧಾನ ಮಂತ್ರಿಗಳ ಕೋವಿಡ್​ 19 ಪರಿಹಾರ ನಿಧಿಗೆ ಪಾವತಿಸಬೇಕು ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...