ಅಮಿತಾಭ್ ಬಚ್ಚನ್ ಅಭಿನಯದ ಜುಂಡ್ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯು ಅರ್ಜಿಯಲ್ಲಿ ಕೆಲವು ಮಾಹಿತಿಗಳನ್ನು ಮುಚ್ಚಿಟ್ಟಿದ್ದಕ್ಕಾಗಿ ಪ್ರಧಾನಿ ಮಂತ್ರಿ ಕೋವಿಡ್ 19 ಫಂಡ್ಗೆ 10 ಲಕ್ಷ ರೂಪಾಯಿ ಹಣವನ್ನು ಜಮೆ ಮಾಡುವಂತೆ ತೆಲಂಗಾಣ ಹೈಕೋರ್ಟ್ ಆದೇಶ ನೀಡಿದೆ.
ಅರ್ಜಿದಾರರಾದ ನಂದಿ ಚಿನ್ನಿ ಕುಮಾರ್ ಗುರುವಾರದಂದು ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಈ ಸಿನಿಮಾವು ಫುಟ್ಬಾಲ್ ಆಟಗಾರ ಅಖಿಲೇಶ್ ಪಾಲ್ ಜೀವನವನ್ನಾಧರಿಸಿದೆ. ಅಲ್ಲದೇ ತಾನು ಈ ಚಲನಚಿತ್ರವನ್ನು ನಿರ್ಮಾಣ ಮಾಡಲು 2017ರಲ್ಲಿ ಕಥೆಯ ಹಕ್ಕನ್ನು ಪಡೆದುಕೊಂಡಿದ್ದೇನೆ ಎಂದು ವಾದಿಸಿದ್ದರು. ಜುಂಡ್ ಸಿನಿಮಾ ಕೂಡ ಇದೇ ಕಥಾಹಂದರವನ್ನು ಹೊಂದಿದೆ ಎಂದು ಹೇಳಿದ್ದರು.
ಆದರೆ ವಿಚಾರಣಾ ನ್ಯಾಯಾಲಯದ ಮುಂದೆ ಚಿನ್ನಿ ಕುಮಾರ್ ಅನೇಕ ವಿಚಾರಗಳನ್ನು ಮುಚ್ಚಿಟ್ಟಿದ್ದಾರೆ ಎಂಬ ಕಾರಣಕ್ಕೆ ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಿದೆ. ಅರ್ಜಿದಾರ ನಿರ್ಮಾಪಕರೊಂದಿಗೆ ರಾಜಿ ಮಾಡಿಕೊಂಡ ಬಳಿಕ 5 ಕೋಟಿ ರೂಪಾಯಿ ಮೊತ್ತವನ್ನು ಪಡೆದುಕೊಂಡಿದ್ದಾರೆ. ಆದರೆ ಈಗ ಅವರು ನಿರ್ಮಾಪಕರ ಹಾದಿಯನ್ನು ತಪ್ಪಿಸಿದ್ದಾರೆ ಎಂದು ಕೋರ್ಟ್ ಹೇಳಿದೆ.
ಈ ಆಧಾರದ ಮೇಲೆ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ, ಹಾಗೂ ಅರ್ಜಿದಾರ ಚಿನ್ನಿ ಕುಮಾರ್ಗೆ 10 ಲಕ್ಷ ರೂಪಾಯಿ ಹಣವನ್ನು ಮೂವತ್ತು ದಿನಗಳಲ್ಲಿ ಪ್ರಧಾನ ಮಂತ್ರಿಗಳ ಕೋವಿಡ್ 19 ಪರಿಹಾರ ನಿಧಿಗೆ ಪಾವತಿಸಬೇಕು ಎಂದು ಹೇಳಿದೆ.