ಕಾರು ಈಗ ಪ್ರತಿ ಕುಟುಂಬದ ಅಗತ್ಯಗಳಲ್ಲೊಂದು. ಫ್ಯಾಮಿಲಿ ದೊಡ್ಡದಾದ ಹಾಗೆ ಕಾರು ಕೂಡ ದೊಡ್ಡದೇ ಬೇಕು. ಸಾಮಾನ್ಯವಾಗಿ 5 ಆಸನಗಳ ಕಾರುಗಳು ಹೆಚ್ಚಾಗಿ ಮಾರಾಟವಾಗುತ್ತವೆ. ಆದ್ರೆ ದೊಡ್ಡ ಕುಟುಂಬಗಳಿಗೆ 7 ಅಥವಾ 8 ಸೀಟರ್ ಕಾರುಗಳ ಅಗತ್ಯವಿರುತ್ತದೆ. 7 ಸೀಟರ್ ಕಾರುಗಳು 5 ಸೀಟರ್ ಕಾರುಗಳಿಗಿಂತ ದುಬಾರಿ. ಆದ್ರೆ ಭಾರತದಲ್ಲಿ ಅಗ್ಗದ ಬೆಲೆಗೇ 7 ಸೀಟರ್ ಕಾರುಗಳು ಲಭ್ಯವಿವೆ. ಅವು ಯಾವುದು ಅನ್ನೋದನ್ನು ನೋಡೋಣ.
ಡಾಟ್ಸನ್ ಗೋ+……
ಈ ಕಾರಿನ ಪ್ರಾರಂಭಿಕ ಬೆಲೆ 4.26 ಲಕ್ಷ ರೂಪಾಯಿ. ಹೆಚ್ಚಿನ್ನ ಸೌಲಭ್ಯಗಳುಳ್ಳ ಟಾಪ್ ಮಾಡೆಲ್ ಬೇಕಂದ್ರೆ 7 ಲಕ್ಷ ವೆಚ್ಚವಾಗುತ್ತದೆ. ಡಾಟ್ಸನ್ ಗೋ ಪ್ಲಸ್ ಕಾರು 7 ರೂಪಾಂತರಗಳಲ್ಲಿ ಲಭ್ಯವಿದೆ. 7 ಆಸನಗಳನ್ನು ಹೊಂದಿರುವ ಈ ವಾಹನಕ್ಕೆ 1198 ಸಿಸಿ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.ಕಾರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ (CVT) ಟ್ರಾನ್ಸ್ಮಿಷನ್ ಆಯ್ಕೆಗಳನ್ನು ಪಡೆಯುತ್ತದೆ. 18.57 ರಿಂದ 19.02 ಕಿಮೀ ಪ್ರತಿ ಲೀಟರ್‌ನಂತೆ ಮೈಲೇಜ್ ನೀಡುತ್ತದೆ.
ರೆನಾಲ್ಟ್ ಟ್ರೈಬರ್……
ರೆನಾಲ್ಟ್ ಟ್ರೈಬರ್ ಕಾರಿನ ಆರಂಭಿಕ ಬೆಲೆ 5.88 ಲಕ್ಷ ರೂಪಾಯಿ ಇದೆ. ಟಾಪ್ ಮಾಡೆಲ್ ಬೆಲೆ 8.44 ಲಕ್ಷದವರೆಗೂ ಇರುತ್ತದೆ. ರೆನಾಲ್ಟ್ ಟ್ರೈಬರ್ ಒಟ್ಟು 10 ರೂಪಾಂತರಗಳಲ್ಲಿ ಬರುತ್ತದೆ. ಇದು ಕೂಡ 7 ಆಸನಗಳ ಕಾರು ಮತ್ತು ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 999 cc ಎಂಜಿನ್ ಹೊಂದಿದ್ದು, ಪ್ರತಿ ಲೀಟರ್‌ಗೆ 18.29 ರಿಂದ 19 ಕಿಮೀ ಮೈಲೇಜ್ ನೀಡುತ್ತದೆ. ಕಾರಿನಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ (AMT) ಎರಡೂ ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ.
ಮಾರುತಿ ಸುಜುಕಿ ಇಕೋ……
ಮಾರುತಿ ಸುಜುಕಿ Eeco ಕಾರಿನ ಆರಂಭಿಕ ಬೆಲೆಯು 4.63 ಲಕ್ಷ ರೂಪಾಯಿ. ಟಾಪ್ ಮಾಡೆಲ್‌ಗೆ 7.63 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದು ಒಟ್ಟು 5 ರೂಪಾಂತರಗಳಲ್ಲಿ ಬರುತ್ತದೆ. 5 ಆಸನ ಮತ್ತು 7 ಆಸನಗಳ ಆಯ್ಕೆಗಳನ್ನು ಹೊಂದಿದೆ. ಈ ಕಾರು 1196 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರ CNG ಆವೃತ್ತಿ ಕೂಡ ಲಭ್ಯವಿದೆ. ಇದರಲ್ಲಿ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಮಾತ್ರ ಲಭ್ಯವಿದೆ. ಇದು ಪ್ರತಿ ಲೀಟರ್‌ಗೆ 16.11 ರಿಂದ 20.88 ಕಿಮೀ ಮೈಲೇಜ್ ನೀಡಬಲ್ಲದು.