alex Certify ʼಫ್ಯಾಟ್‌ ಸರ್ಜರಿʼ ವೇಳೆ ನಟಿ ಚೇತನಾ ರಾಜ್ ಸಾವು; ರಾಖಿ ಸಾವಂತ್‌ ಹೇಳಿದ್ದೇನು ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಫ್ಯಾಟ್‌ ಸರ್ಜರಿʼ ವೇಳೆ ನಟಿ ಚೇತನಾ ರಾಜ್ ಸಾವು; ರಾಖಿ ಸಾವಂತ್‌ ಹೇಳಿದ್ದೇನು ?

ಫ್ಯಾಟ್ ಸರ್ಜರಿ ಸಂದರ್ಭದಲ್ಲಿ ಶ್ವಾಸಕೋಶಕ್ಕೆ ನೀರಿನ ಅಂಶ ಸೇರಿಕೊಂಡು ಕನ್ನಡದ ಕಿರುತೆರೆ ನಟಿ ಚೇತನಾ ರಾಜ್ ಸಾವನ್ನಪ್ಪಿರುವ ಬಗ್ಗೆ ಬಾಲಿವುಡ್ ನಟಿ ರಾಖಿ ಸಾವಂತ್ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ರಾಖಿ ಸಾವಂತ್, ಚೇತನಾ ರಾಜ್ ಅವರ ಸಾವಿನ ಬಗ್ಗೆ ಕೇಳಿ ನನಗೆ ತೀವ್ರ ಆಘಾತವಾಗಿದೆ. ಆಕೆಗೆ ಚಿಕಿತ್ಸೆ ನೀಡಿದ ಆಸ್ಪತ್ರೆ ಯಾವುದು ? ವೈದ್ಯ ಮಹಾನುಭಾವರು ಯಾರು ? ಎಂದು ಪ್ರಶ್ನಿಸಿದ್ದಾರೆ.

ಕೇವಲ 21 ವರ್ಷದ ನಟಿ ಸಾವನ್ನಪ್ಪುವಂತಹ ರೀತಿಯಲ್ಲಿ ಅದ್ಯಾವ ಚಿಕಿತ್ಸೆ ನೀಡಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಸರ್ಜರಿ ಮಾಡಿಸಿಕೊಂಡವರಿಗೆ ಹಾಗೆ ಆಗುವುದೇ ಇಲ್ಲ. ಪ್ಲಾಸ್ಟಿಕ್ ಸರ್ಜರಿ ಮಾಡಿದ ವೈದ್ಯರಿಗೆ ಅದ್ಯಾರು ಡಿಗ್ರಿ ಕೊಟ್ಟಿದ್ದಾರೋ ಏನೋ ? ಈಗೀಗ ಯಾರು ಬೇಕಾದರೂ ಡಾಕ್ಟರ್ ಆಗಬಹುದಾಗಿದೆ, ಯಾರು ಬೇಕಾದರೂ ನರ್ಸ್ ಅಥವಾ ಯಾರು ಬೇಕಾದರೂ ಪ್ಲಾಸ್ಟಿಕ್ ಸರ್ಜನ್ ಗಳಾಗಬಹುದಾಗಿದೆ. ಇದು ಆಘಾತಕಾರಿ ವಿಚಾರವಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ನಿಮಗೆ ಗೊತ್ತಿಲ್ಲದಿದ್ದರೆ ಪ್ಲಾಸ್ಟಿಕ್ ಸರ್ಜರಿಯಲ್ಲಿ ಯಾವುದು ಸೂಕ್ತ ಎಂಬುದರ ಬಗ್ಗೆ ತಿಳಿದುಕೊಂಡಿರುವ ಬಾಲಿವುಡ್ ಜನರಲ್ಲಿ ಕೇಳಿ ತಿಳಿದುಕೊಳ್ಳಿ, ನನ್ನನ್ನು ಕೇಳಿ. ಯಾವ ವೈದ್ಯರು ಸೂಕ್ತ ಎಂಬುದರ ಬಗ್ಗೆ ಹೇಳುತ್ತೇವೆ. ನಿಮಗೆ ಮಾರ್ಗದರ್ಶನ ನೀಡುತ್ತೇವೆ. ನಿಮಗೆ ಗೊತ್ತಿಲ್ಲದವರ ಬಳಿ ಹೋಗಬೇಡಿ ಮತ್ತು ಆಸ್ಪತ್ರೆಯ ಆಪರೇಷನ್ ಥಿಯೇಟರ್ ಗೆ ಹೋಗಿ ಸರ್ಜರಿ ಮಾಡಿಸಿಕೊಳ್ಳಬೇಡಿ ಎಂದು ಸಲಹೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...