• ಫೇಸ್‌ಬುಕ್ ಅಪ್ಲಿಕೇಶನ್ ತೆರೆದ ನಂತರ, ನಿಮ್ಮ ಫೇಸ್‌ಬುಕ್ ಖಾತೆಗೆ ಲಾಗ್ ಇನ್ ಆಗಿ.
• ಅಪ್ಲಿಕೇಶನ್‌ನ ಬಲ ಮೂಲೆಯಲ್ಲಿ, ನಿಮ್ಮ ಮುಖ್ಯ ಮೆನುವನ್ನು ಪ್ರವೇಶಿಸಲು “ಮೂರು ಲೈನ್” ಇದ್ದು, ಅದನ್ನು ಕ್ಲಿಕ್ ಮಾಡಿ.
• ಡ್ರಾಪ್-ಡೌನ್ ಮೆನು ತೆರೆದುಕೊಂಡಾಗ ಅದರಿಂದ ” Privacy Shortcuts” ಆಯ್ಕೆಮಾಡಿ.
• ಅದರ ಡ್ರಾಪ್-ಡೌನ್ ಮೆನುವಿನಿಂದ ” Who Viewed My Profile” ಆಯ್ಕೆಮಾಡಿ.
ಇದೇ ರೀತಿ, ಮ್ಯಾಕ್ ಅಥವಾ ಪಿಸಿಯಲ್ಲಿ ಫೇಸ್‌ಬುಕ್ ಪ್ರೊಫೈಲನ್ನು ಯಾರು ವೀಕ್ಷಿಸಿದ್ದಾರೆ ಎಂಬುದನ್ನು ಹೀಗೆ ನೋಡಬಹುದು –
• ನಿಮ್ಮ ವೆಬ್ ಬ್ರೌಸರ್ ಓಪನ್ ಮಾಡಿ
• ಅದರಲ್ಲಿ ಫೇಸ್‌ಬುಕ್ ಪುಟಕ್ಕೆ ಹೋಗಿ ಮತ್ತು ಲಾಗ್ ಇನ್ ಆಗಿ
• ನಿಮ್ಮ ಪ್ರೊಫೈಲನ್ನು ಪ್ರವೇಶಿಸುವುದಕ್ಕೆ, ನಿಮ್ಮ “user name” ಮೇಲೆ ಕ್ಲಿಕ್ ಮಾಡಿ.
• ಪ್ರೊಫೈಲ್ ಪುಟದ ಖಾಲಿ ಭಾಗದಲ್ಲಿ ಕರ್ಸರ್ ಇಟ್ಟು ಮೌಸ್‌ನ ಬಲ ಭಾಗ ಕ್ಲಿಕ್ ಮಾಡಿ.
• ಮೆನುವಿನಿಂದ, “View Page Source” ಆಯ್ಕೆಮಾಡಿ. ಪಾಪ್-ಅಪ್ ಕನ್ಸೋಲ್ ಪುಟ ಹಲವು ಟ್ಯಾಬ್‌ಗಳನ್ನು ತೋರಿಸುತ್ತದೆ. ಅದರಲ್ಲಿ ಪುಟದ ಸೋರ್ಸ್ ಕೋಡ್ ಕೂಡ ಇರುತ್ತದೆ.
• ಸರ್ಚ್ ಬಾರ್‌ನಲ್ಲಿ, “Ctrl+F” ಒತ್ತಿರಿ.
• ಸರ್ಚ್ ಬಾರ್‌ನಲ್ಲಿ, ಉಲ್ಲೇಖಗಳಿಲ್ಲದೆಯೇ “InitialChatFriendsList” ಎಂದು ಟೈಪ್ ಮಾಡಿ.
• ಇದರಿಂದ ಪ್ರೊಫೈಲ್ ಕೋಡ್ ಸಂಖ್ಯೆಗಳ ಪಟ್ಟಿ ಕಾಣುತ್ತದೆ. ಒಮ್ಮೆ ಒಂದು ಪ್ರೊಫೈಲ್ ಕೋಡ್ ಸಂಖ್ಯೆ ಹೈಲೈಟ್ ಮಾಡಿ, ಕಾಪಿ ಮಾಡಿಕೊಳ್ಳಬೇಕು.
• ನಿಮ್ಮ ಬ್ರೌಸರ್‌ನಲ್ಲಿ ಹೊಸ ಟ್ಯಾಬ್ ಓಪನ್ ಮಾಡಿ.
• ಅದರಲ್ಲಿ http://facebook.com/ ಎಂದು ಟೈಪ್ ಮಾಡಿ. ಕೋಡ್ ಸಂಖ್ಯೆಗಳ ಪೈಕಿ ಒಂದನ್ನು “/” ನಂತರ ಪೇಸ್ಟ್ ಮಾಡಿ. ನಿಮ್ಮ ಪುಟವನ್ನು ಇತ್ತೀಚೆಗೆ ನೋಡಿದ ಪ್ರೊಫೈಲನ್ನು ಇದು ನಿಮಗೆ ತೋರಿಸುತ್ತದೆ.