ಇತ್ತೀಚೆಗೆ ಪ್ರೇಮ ವಿವಾಹಗಳು ಜಾಸ್ತಿಯಾಗ್ತಿವೆ. ಪರಸ್ಪರ ಪ್ರೀತಿಸಿ ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದೆ. ಜೋತಿಷ್ಯ ಶಾಸ್ತ್ರದಲ್ಲೂ ಯಾವ ರಾಶಿಯವರು ಪ್ರೇಮ ವಿವಾಹವಾಗ್ತಾರೆ ಎಂಬುದನ್ನು ಹೇಳಲಾಗಿದೆ.
ಮೇಷ ರಾಶಿ: ಈ ರಾಶಿಯ ಜನರು ಸೌಮ್ಯ ಹಾಗೂ ಶಾಂತವಾಗಿರುತ್ತಾರೆ. ಸುಲಭವಾಗಿ ಜನರ ಹೃದಯದಲ್ಲಿ ಸ್ಥಾನ ಪಡೆಯುತ್ತಾರೆ. ಮೇಷ ರಾಶಿಯವರು ಪ್ರೀತಿಯ ಸ್ವಭಾವ ಹೊಂದಿರುತ್ತಾರೆ. ವೈವಾಹಿಕ ಜೀವನದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ತಾರೆ.
ಕುಂಭ ರಾಶಿ: ಈ ರಾಶಿ ಜನರು ಬಹಳ ಗಂಭೀರ ಸ್ವಭಾವದವರು. ಈ ರಾಶಿ ಜನರು ಎಲ್ಲಾ ಕೆಲಸಗಳನ್ನು ಬಹಳ ಎಚ್ಚರಿಕೆಯಿಂದ ಮಾಡುತ್ತಾರೆ. ಕುಂಭ ರಾಶಿಯವರು ಪ್ರಣಯ ಸ್ವಭಾವದವರು.
ಮಕರ ರಾಶಿ: ಮಕರ ರಾಶಿಯ ಜನರು ಪ್ರೀತಿಯ ವಿಷಯದಲ್ಲಿ ಅದೃಷ್ಟಶಾಲಿಗಳು. ಪ್ರೇಮ ವಿವಾಹದಲ್ಲೂ ಅದೃಷ್ಟವಂತರು. ಪ್ರೇಮ ವಿವಾಹದ ವೇಳೆ ಹೆಚ್ಚಿನ ತೊಂದರೆಗಳನ್ನು ಅವರು ಅನುಭವಿಸುವುದಿಲ್ಲ.