alex Certify ʼಪುಷ್ಪಾʼ ಸಿನಿಮಾಗೂ ಟಾಮ್​ & ಜೆರ್ರಿ ಕಾಟೂರ್ನ್​ಗೂ ಇದೆಯಂತೆ ಸಾಮ್ಯತೆ..! ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪುಷ್ಪಾʼ ಸಿನಿಮಾಗೂ ಟಾಮ್​ & ಜೆರ್ರಿ ಕಾಟೂರ್ನ್​ಗೂ ಇದೆಯಂತೆ ಸಾಮ್ಯತೆ..! ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ವಿಡಿಯೋ

ಪುಷ್ಪಾ ದಿ ರೈಸ್​ ಸಿನಿಮಾಗೆ ಸಂಬಂಧಿಸಿದ ಸಾಕಷ್ಟು ರೀಲ್ಸ್​ ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಸಿನಿಮಾ ತೆರೆ ಕಂಡು ಎರಡು ತಿಂಗಳುಗಳೇ ಕಳೆದರೂ ಸಹ ಪುಷ್ಪಾ ಸಿನಿಮಾದ ಕ್ರೇಜ್​ ಮಾತ್ರ ಒಂದಿಂಚೂ ಕಡಿಮೆಯಾದಂತೆ ಕಾಣುತ್ತಿಲ್ಲ.

ತೆಲುಗು ನಟ ಅಲ್ಲು ಅರ್ಜುನ್​ ಶ್ರೀವಲ್ಲಿ ಹಾಡಿಗೆ ಹಾಕಿದ ಹೆಜ್ಜೆ ಹಾಗೂ ರಶ್ಮಿಕಾ ಮಂದಣ್ಣರ ಸಾಮೆ ಹಾಡಿನ ನೃತ್ಯ ಮತ್ತು ಸಮಂತಾರ ಊ ಅಂಟಾವಾ ಪ್ರದರ್ಶನವನ್ನು ಅನೇಕರು ರೀಲ್ಸ್​​ನಲ್ಲಿ ಟ್ರೈ ಮಾಡುತ್ತಲೇ ಇದ್ದಾರೆ.

ಪುಷ್ಪಾ ಸಿನಿಮಾ ಒಂದು ಗಂಭೀರವಾದ ಕಥೆಯನ್ನು ಹೊಂದಿರುವಂತಹ ಒಂದು ಚಿತ್ರವಾಗಿದೆ. ಆದರೆ ಎಂದಾದರೂ ನೀವು ಪುಷ್ಪಾ ಸಿನಿಮಾವು ಕಾರ್ಟೂನ್ ಸಿರೀಸ್​ ಟಾಮ್​ & ಜೆರ್ರಿಗೆ ಹೋಲಿಕೆ ಮಾಡಿದ್ದುಂಟೇ..?

ಸೋಶಿಯಲ್​ ಮೀಡಿಯಾದಲ್ಲಿ ಸದ್ಯ ವೈರಲ್​ ಆಗುತ್ತಿರುವ ವಿಡಿಯೋಗಳಲ್ಲಿ ರಶ್ಮಿಕಾ ಮಂದಣ್ಣರ ಸಾಮಿ ಸಾಮಿ ಸ್ಟೆಪ್ಸ್​, ಅಲ್ಲು ಅರ್ಜುನ್​​ರ ಶ್ರೀವಲ್ಲಿ ಹೆಜ್ಜೆಗಳನ್ನು ಟಾಮ್​ & ಜೆರ್ರಿ ಕಾರ್ಟೂನ್​ ಪಾತ್ರಗಳು ಈ ಹಿಂದೆಯೇ ಮಾಡಿ ತೋರಿಸಿರೋದನ್ನು ಕಾಣಬಹುದಾಗಿದೆ.

ಈ ವಿಡಿಯೋ ಯುಟ್ಯೂಬ್​ನಲ್ಲಿ ಎಷ್ಟರ ಮಟ್ಟಿಗೆ ವೈರಲ್​ ಆಗಿದೆ ಅಂದರೆ ಈವರೆಗೆ 3 ಲಕ್ಷಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ. ಅಲ್ಲದೇ ಈ ವಿಡಿಯೋವನ್ನು ಎಡಿಟ್​ ಮಾಡಿದವರ ಚಾಕಚಕ್ಯತೆಗೆ ನೆಟ್ಟಿಗರು ಶಹಬ್ಬಾಸ್​ ಎಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...