alex Certify ʼಪಡಿತರ ಚೀಟಿʼ ಹೊಂದಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಡಿತರ ಚೀಟಿʼ ಹೊಂದಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ರೇಶನ್‌ ಕಾರ್ಡ್‌ ಹೊಂದಿರುವವರು ಓದಲೇಬೇಕಾದ ಸುದ್ದಿ ಇದು. ನೀವೇನಾದ್ರೂ ಅನರ್ಹರಾಗಿದ್ದುಕೊಂಡು ಪಡಿತರ ಚೀಟಿ ಪಡೆದುಕೊಂಡಿದ್ದರೆ ಸದ್ಯದಲ್ಲೇ ನಿಮ್ಮ ಕಾರ್ಡ್‌ ಕೂಡ ರದ್ದಾಗಬಹುದು. ಇಂಥದ್ದೊಂದು ಹೊಸ ಆದೇಶ ಉತ್ತರ ಪ್ರದೇಶದಲ್ಲಿ ಸದ್ದು ಮಾಡ್ತಾ ಇದೆ.

ಅದೇ ನಿಯಮ ಎಲ್ಲಾ ರಾಜ್ಯಗಳಿಗೆ ವಿಸ್ತರಿಸಿದ್ರೂ ಅಚ್ಚರಿಯೇನಿಲ್ಲ. ಪಡಿತರ ಚೀಟಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಯೋಗಿ ಸರ್ಕಾರ ಹೊಸ ಆದೇಶವನ್ನು ನೀಡಿದೆ. ಈ ಆದೇಶದ ಅಡಿಯಲ್ಲಿ ಅಂತ್ಯೋದಯ ಮತ್ತು ಅರ್ಹ ಗೃಹ ಪಡಿತರ ಚೀಟಿದಾರರ ಪರಿಶೀಲನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು.

ಪರಿಶೀಲನೆ ವೇಳೆಯಲ್ಲಿ ಅನರ್ಹರೆಂದು ಕಂಡುಬಂದ ಫಲಾನುಭವಿಗಳ ಪಡಿತರ ಚೀಟಿ ರದ್ದುಪಡಿಸಲಾಗುವುದು ಮತ್ತು ಅವರಿಗೆ ಪಡಿತರ ಸಿಗುವುದಿಲ್ಲ. ಫಲಾನುಭವಿಗಳ ಮಾಹಿತಿಯು ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಪರಿಶೀಲನೆಯ ಸಮಯದಲ್ಲಿ ಅಕ್ರಮವಾಗಿ ರೇಶನ್‌ ಕಾರ್ಡ್‌ ಪಡೆದವರರ ಚೀಟಿಗಳನ್ನು ರದ್ದುಪಡಿಸಿ, ಹೊಸ ಅರ್ಹ ಅರ್ಜಿದಾರರ ಪಡಿತರ ಚೀಟಿಗಳನ್ನು ಮಾಡಲಾಗುವುದು.ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸರಬರಾಜು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ.

ಫಲಾನುಭವಿಗಳು ನೀಡುವ ವೈಯಕ್ತಿಕ ಮಾಹಿತಿಯು ಕಾಲಕಾಲಕ್ಕೆ ಬದಲಾಗುತ್ತಲೇ ಇರುವುದರಿಂದ ಈ ನಿಯಮ ಜಾರಿಯಾಗಲಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕುವುದು ಇದರ ಉದ್ದೇಶ. ಪಡಿತರ ಚೀಟಿ ಫಲಾನುಭವಿಗಳ ಪಟ್ಟಿಗೆ ಅನರ್ಹರು ಸೇರ್ಪಡೆಯಾಗಿರುವ ಬಗ್ಗೆ ದೂರುಗಳು ಬಂದಿರುವುದರಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013’ ಅಡಿಯಲ್ಲಿ ಅಭಿಯಾನವನ್ನು ನಡೆಸಲಾಗುತ್ತದೆ. ಅನರ್ಹರೆಂದು ಕಂಡುಬಂದ ಫಲಾನುಭವಿಗಳ ಬದಲಿಗೆ ಅರ್ಹರಿಗೆ ಪಡಿತರ ಚೀಟಿಗಳನ್ನು ನೀಡಲಾಗುತ್ತದೆ.

ಕುಟುಂಬದ ಸದಸ್ಯರ ಸಂಖ್ಯೆ, ವಯಸ್ಸು, ವಾಸಸ್ಥಳ ಇತ್ಯಾದಿ ವಿವರಗಳನ್ನು ಸಂಗ್ರಹಿಸಿ ಡೇಟಾಬೇಸ್ ಸಿದ್ಧಪಡಿಸಲಾಗುತ್ತದೆ. ಈ ನಿಟ್ಟಿನಲ್ಲಿ, ಕಾರ್ಡ್ ಹೊಂದಿರುವವರ ಮರಣ ಅಥವಾ ಉತ್ತಮ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಕಾರ್ಡ್ ಅನರ್ಹರಾಗುವ ಸಾಧ್ಯತೆಯಿದೆ. ಸರ್ಕಾರವೇ ನೀಡಿದ ಮಾಹಿತಿಯ ಪ್ರಕಾರ 2017-2021ರವರೆಗೆ ನಕಲಿ, ಅನರ್ಹರು ಸೇರಿದಂತೆ 2 ಕೋಟಿ 41 ಲಕ್ಷ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಸುಮಾರು 1.42 ಕೋಟಿ ರೇಶನ್‌ ಕಾರ್ಡ್‌ಗಳು ರದ್ದಾಗಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...