alex Certify ʼನಾಗರ ಪಂಚಮಿʼಯಂದು ಈ ತಪ್ಪು ಮಾಡಲೇಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನಾಗರ ಪಂಚಮಿʼಯಂದು ಈ ತಪ್ಪು ಮಾಡಲೇಬೇಡಿ

ನಾಗ ಪಂಚಮಿಯ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಇಡೀ ದೇಶ ಈ ಹಬ್ಬವನ್ನು ಆಚರಿಸುತ್ತದೆ. ಈ ದಿನ  ಜನರು ದೇವಾಲಯಗಳಲ್ಲಿ ಅಥವಾ ಮನೆಗಳಲ್ಲಿ ಹಾವಿನ ಪೂಜೆ ಮಾಡ್ತಾರೆ. ಉಪವಾಸ ಮಾಡಿ, ಕ್ರಮಬದ್ಧವಾಗಿ ಪೂಜಿಸುತ್ತಾರೆ.

ಈ ಬಾರಿ ಆಗಸ್ಟ್‌ 2 ರಂದು ನಾಗರ ಪಂಚಮಿ ಆಚರಿಸಲಾಗ್ತಿದೆ. ನಾಗಪಂಚಮಿ ವಿಶೇಷ ಹಬ್ಬವನ್ನು ನಾಗ ದೇವನಿಗೆ ಅರ್ಪಿಸಲಾಗಿದೆ. ಮನೆಯ ಮುಖ್ಯ ದ್ವಾರದಲ್ಲಿ ಸರ್ಪದ ಪ್ರತಿಮೆ ಅಥವಾ ಚಿತ್ರವನ್ನು ಮಾಡಿ ಪೂಜೆ ಮಾಡುವವರೂ ಇದ್ದಾರೆ. ಬೇರೆ ಬೇರೆ ಪ್ರದೇಶದಲ್ಲಿ ನಾಗರ ಪಂಚಮಿಯನ್ನು ಭಿನ್ನವಾಗಿ ಆಚರಿಸಲಾಗುತ್ತದೆ.

ಜನರು ಈ ದಿನ ನಾಗರಾಜನಿಗೆ ಹಾಲು ನೀಡುತ್ತಾರೆ. ವಿಜ್ಞಾನಿಗಳ ಪ್ರಕಾರ, ಜೀವಿಗಳಿಗೆ ಹಾಲು ವಿಷವಾಗುವ ಸಾಧ್ಯತೆಯಿದೆ. ಹಾಗಾಗಿ ನಿಜವಾದ ಹಾವಿಗೆ ಹಾಲು ನೀಡಬೇಡಿ ಎಂದು ಹೇಳಲಾಗುತ್ತದೆ.

ಜಾತಕದಲ್ಲಿ ಸರ್ಪದೋಷವಿದ್ದರೆ ನಾಗರಪಂಚಮಿ ದಿನದಂದು ದೇವಸ್ಥಾನಕ್ಕೆ ಹೋಗಿ ನಾಗರ ಪೂಜೆ ಮಾಡಬೇಕು. ಯಾವುದೇ ಕಾರಣಕ್ಕೂ ನಾಗರಾಜನಿಗೆ ಹಾನಿ ಮಾಡಬಾರದು. ಶಿವ ಹಾಗೂ ವಿಷ್ಣುವಿನ ಆರಾಧನೆ ಮಾಡಿದ್ರೆ ದೋಷ ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...