alex Certify ʼತಾಯಂದಿರ ದಿನʼದಂದು ಇಡ್ಲಿ ಅಮ್ಮನಿಗೆ ಆನಂದ್ ಮಹೀಂದ್ರಾರಿಂದ ಮನೆ ಗಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼತಾಯಂದಿರ ದಿನʼದಂದು ಇಡ್ಲಿ ಅಮ್ಮನಿಗೆ ಆನಂದ್ ಮಹೀಂದ್ರಾರಿಂದ ಮನೆ ಗಿಫ್ಟ್

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಾವು ಹೇಳಿದ ಮಾತಿಗೆ ಬದ್ಧರಾಗಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರು ತಮಿಳುನಾಡಿನ ಇಡ್ಲಿ ಅಮ್ಮನಿಗೆ ಹೊಸ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

2021ರ ಏಪ್ರಿಲ್‌ನಲ್ಲಿ ಟ್ವೀಟ್ ಮಾಡಿದ್ದ ಉದ್ಯಮಿ ಮಹೀಂದ್ರಾ ಅವರು ಒಂದು ರೂ.ಗೆ ಇಡ್ಲಿ ಮಾರಾಟ ಮಾಡುವ ಅಮ್ಮ ಶೀಘ್ರ ತಮ್ಮ ಸ್ವಂತ ಮನೆಯನ್ನು ಹೊಂದಲಿದ್ದಾರೆ ಎಂದಿದ್ದರು. ಇದೀಗ ತಾವು ಹೇಳಿದ ಮಾತಿನಂತೆ ಉದ್ಯಮಿ ನಡೆದುಕೊಂಡಿದ್ದು, ಇಡ್ಲಿ ಅಮ್ಮಗೆ ವಿಶ್ವ ತಾಯಂದಿರ ದಿನದಂದೇ ಮನೆಯನ್ನು ಗಿಫ್ಟ್ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಉದ್ಯಮಿ ಮಹೀಂದ್ರಾ, ತಾಯಂದಿರ ದಿನದಂದು ಇಡ್ಲಿ ಅಮ್ಮನಿಗೆ ಉಡುಗೊರೆಯಾಗಿ ನೀಡಲು ಸಮಯಕ್ಕೆ ಸರಿಯಾಗಿ ಮನೆಯ ನಿರ್ಮಾಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ತಮ್ಮ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕಮಲಾತಲ್ ಎಂದು ಕರೆಯಲ್ಪಡುವ ಇಡ್ಲಿ ಅಮ್ಮ ತಮಿಳುನಾಡಿನ ಪೆರು ಬಳಿಯ ವಡಿವೇಲಂಪಾಳ್ಯಂ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಸುಮಾರು 37 ವರ್ಷಗಳಿಂದ ಕೇವಲ 1 ರೂಪಾಯಿಗೆ ಸಾಂಬಾರ್ ಮತ್ತು ಚಟ್ನಿಯೊಂದಿಗೆ ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಕಮಲಾತಲ್ ಅವರು ಸೂರ್ಯೋದಯದಿಂದ ಇಡ್ಲಿಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ

ಆಕೆಯ ಕಥೆಯು 2019 ರಲ್ಲಿ ವೈರಲ್ ಆಗಿತ್ತು. ಇದು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರ ಗಮನಕ್ಕೂ ಬಂದಿತು. ಹೀಗಾಗಿ ಅಂದು ಅವರಿಗಾಗಿ ಮನೆಯನ್ನು ಕೊಡುವುದಾಗಿ ಮಾತುಕೊಟ್ಟಿದ್ದ ಅವರು, ಇಂದು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಮಹೀಂದ್ರಾ ಅವರ ಈ ಅಪೂರ್ವ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

— anand mahindra (@anandmahindra) May 8, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...