alex Certify ʼಟಾಯ್ಲೆಟ್ʼ ಬಳಸುವ ಮುನ್ನ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಟಾಯ್ಲೆಟ್ʼ ಬಳಸುವ ಮುನ್ನ ತಿಳಿದಿರಲಿ ಈ ವಿಷಯ

ಅಮೆರಿಕನ್ ಸ್ಟೈಲ್ ಟಾಯ್ಲೆಟ್ ಎಂದೇ ಹೆಸರು ಪಡೆದು ಮನೆಮನೆಗೂ ಲಗ್ಗೆ ಇಟ್ಟಿರುವ ಫ್ಲಶ್ (ವೆಸ್ಟರ್ನ್ ಟಾಯ್ಲೆಟ್) ಇಂದು ಎಲ್ಲರ ಅನಿವಾರ್ಯಗಳಲ್ಲಿ ಒಂದಾಗಿದೆ. ಮನೆಯಲ್ಲಿ ವಯಸ್ಸಾದವರು, ಕಾಲು – ಸೊಂಟ ನೋವಿರುವವರು ವಿದೇಶಿ ಶೈಲಿಯ ಕಮೋಡ್ ಗಳನ್ನು ಬಳಸಲು ಆರಂಭಿಸುತ್ತಲೇ ಇತ್ತ ಯುವಜನತೆಯೂ ಅದರತ್ತ ಆಕರ್ಷಿತರಾಗಿದ್ದಾರೆ.

ಆದರೆ ಇದರ ಬಳಕೆಯ ಬಗ್ಗೆ ಹಲವು ತಪ್ಪು ಅಭಿಪ್ರಾಯಗಳಿವೆ. ಮೊದಲನೆಯದಾಗಿ ಕಮೋಡ್ ಮೇಲೆ ಹತ್ತುವುದು. ಯಾವುದೇ ಕಾರಣಕ್ಕೆ ಕಮೋಡ್ ಮೇಲೆ ಹತ್ತಿ ಕೂರದಿರಿ. ಅದು ನಿಮ್ಮ ಪೃಷ್ಠ ಭಾಗವನ್ನು ಇಡಲು ಇರುವ ಜಾಗವೇ ಹೊರತು ಕಾಲುಗಳನ್ನಲ್ಲ ಎಂಬುದನ್ನು ನೆನಪಿಡಿ.

ಟಾಯ್ಲೆಟ್ ಬಳಕೆಯ ನಂತರ ಅದರ ಮುಚ್ಚಳವನ್ನು ಮುಚ್ಚಿಯೇ ಫ್ಲಶ್ ಮಾಡಬೇಕು. ಇಲ್ಲವಾದರೆ ಅದರೊಳಗಿನ ನೀರು ಕಲ್ಮಶಗಳು ಮೇಲೆ ಹಾರುವ ಸಾಧ್ಯತೆ ಇದೆ. ಅಲ್ಲದೆ ಕಮೋಡ್ ಸುತ್ತ ರೋಗಾಣು ಉತ್ಪತ್ತಿ ಆಗುವ ಸಾಧ್ಯತೆಗಳೂ ಇವೆ.

ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಟಾಯ್ಲೆಟ್ ಫ್ಲಶ್ ಬಟನ್ ಅನ್ನೂ ಸ್ವಚ್ಛಗೊಳಿಸುತ್ತಿರಬೇಕು. ಅದನ್ನು ಮುಟ್ಟುವ ಮುನ್ನ ಕೈಯಲ್ಲಿ ಮಣ್ಣು ಇಲ್ಲದಿರಲಿ. ಕೀಟಾಣು ಬ್ಯಾಕ್ಟೀರಿಯಾ ಅಲ್ಲೇ ಉಳಿದುಕೊಳ್ಳುವ ಪರಿಣಾಮ ಅದು ಇನ್ನೊಬ್ಬರಿಗೆ ಹರಡಲು ಕಾರಣವಾಗಬಹುದು.

ಟಾಯ್ಲೆಟ್ ತೊಳೆದ ಬ್ರಶ್ ನಲ್ಲಿ ಸಾಕಸ್ಟು ಸೂಕ್ಮಾಣುಗಳು ಅಂಟಿಕೊಂಡಿರುತ್ತವೆ. ಹಾಗಾಗಿ ಬ್ರಶ್ ಗಳನ್ನು ಬಿಸಿನೀರಿನಿಂದ ಅಥವಾ ಸೋಪ್ ನಿಂದ ತೊಳೆಯುವುದು ಬಹಳ ಮುಖ್ಯ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...