alex Certify ʼಜುಲೈʼ ತಿಂಗಳಿನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೀಗಿರುತ್ತೆ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಜುಲೈʼ ತಿಂಗಳಿನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೀಗಿರುತ್ತೆ ನೋಡಿ

ಜುಲೈ ತಿಂಗಳಿನಲ್ಲಿ ಹುಟ್ಟಿದವರು ತುಂಬಾ ಅಶಾವಾದಿಗಳು ಆಗಿರುತ್ತಾರಂತೆ. ಹಾಗೇ ಇವರ ವ್ಯಕ್ತಿತ್ವಕ್ಕೆ ಕೂಡ ಎಲ್ಲರನ್ನೂ ಸೆಳೆಯುವ ಗುಣವಿದೆಯಂತೆ. ಜುಲೈ ತಿಂಗಳಿನಲ್ಲಿ ಹುಟ್ಟಿದವರ ವ್ಯಕ್ತಿತ್ವದ ಬಗ್ಗೆ ಇನ್ನಷ್ಟು ವಿಷಯದ ಕುರಿತು ಇಲ್ಲಿದೆ ನೋಡಿ ಮಾಹಿತಿ.

ಇವರು ತಮ್ಮ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ಯಾರನ್ನು ಅವಲಂಬಿಸುವುದಿಲ್ಲವಂತೆ. ತಮಗೆ ಸರಿ ಅನಿಸಿದ ನಿರ್ಧಾರವನ್ನು ತೆಗೆದುಕೊಳ್ಳುವ ಗುಣದವರು ಇವರು.

ಇನ್ನು ಇವರಲ್ಲಿ ಸಕಾರಾತ್ಮಕ ಯೋಚನೆಗಳು ಹೆಚ್ಚು. ಹಾಗಾಗಿ ಎಲ್ಲದಕ್ಕೂ ನಿರಾಶವಾದಿಗಳಂತೆ ವರ್ತಿಸದೇ ಸದಾ ಆಶಾವಾದಿಗಳಾಗಿರುತ್ತಾರೆ.

ಇವರು ಶಾಂತ ಸ್ವಭಾವದವರಾಗಿರುತ್ತಾರೆ. ತಮ್ಮ ಭಾವನೆಗಳು ಎಲ್ಲೆಂದರಲ್ಲಿ ಹರಿಬಿಡುವವರಲ್ಲ. ನಿಯಂತ್ರಣದಲ್ಲಿಟ್ಟುಕೊಂಡು ಸಂದರ್ಭಕ್ಕೆ ತಕ್ಕಂತೆ ವರ್ತಿಸುವವರು.

ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗುಣ ಹೊಂದಿದ್ದಾರೆ. ತಮ್ಮನ್ನು ನಂಬಿದವರನ್ನು ಯಾವತ್ತೂ ಕೈ ಬಿಡುವವರಲ್ಲ.

ಇವರಿಗೆ ಸ್ನೇಹಿತರು ಜಾಸ್ತಿ. ಆದರೆ ತಮ್ಮ ಸ್ನೇಹಿತರನ್ನು ಯಾವತ್ತೂ ಬಿಟ್ಟುಕೊಡುವವರಲ್ಲ. ಇವರು ಇದ್ದಲ್ಲಿ ಜನ ಬಂದು ಸೇರುತ್ತಾರೆ.

ಇನ್ನೊಬ್ಬರ ಕುರಿತು ಹಿಂದಿನಿಂದ ಮಾತನಾಡುವವರಲ್ಲ. ಗಾಸಿಪ್ ನಿಂದ ತುಂಬಾ ದೂರ ಇವರು. ಒಳ್ಳೆಯ ಹಾಸ್ಯ ಪ್ರವೃತ್ತಿ ಕೂಡ ಇವರಲ್ಲಿದೆ.

ಇನ್ನೊಬ್ಬರ ಕುರಿತು ಮನಸ್ಸಿನಲ್ಲಿ ಯಾವುದೇ ದ್ವೇಷ ಭಾವನೆ ಇಟ್ಟುಕೊಳ್ಳುವವರಲ್ಲ. ಇವರನ್ನು ದ್ವೇಷಿಸಿದವರನ್ನು ಕೂಡ ಪ್ರೀತಿಸುವ ಗುಣ ಇವರಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...