alex Certify ʼಕ್ರೆಡಿಟ್ʼ ಕಾರ್ಡ್ ವೆಚ್ಚವನ್ನು EMI ಗೆ ಪರಿವರ್ತಿಸುವ ಮುನ್ನ ನಿಮಗಿದು ತಿಳಿದಿರಲಿ… | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕ್ರೆಡಿಟ್ʼ ಕಾರ್ಡ್ ವೆಚ್ಚವನ್ನು EMI ಗೆ ಪರಿವರ್ತಿಸುವ ಮುನ್ನ ನಿಮಗಿದು ತಿಳಿದಿರಲಿ…

ಜೀವನದಲ್ಲಿ ಆಸೆಗಳು ಯಾರಿಗಿರಲ್ಲ ಹೇಳಿ ? ಸುಂದರ ಸ್ಥಳಗಳಿಗೆ ಪ್ರವಾಸ ಹೋಗ್ಬೇಕು, ಐಫೋನ್‌ ಕೊಂಡುಕೊಳ್ಬೇಕು, ಮಾರುಕಟ್ಟೆಗೆ ಬಂದಿರೋ ಹೊಸ ಎಲೆಕ್ಟ್ರಾನಿಕ್‌ ಐಟಮ್‌ ಗಳು ಬೇಕು ಹೀಗೆಲ್ಲ ಹತ್ತಾರು ಬಗೆಯ ಆಸೆ ಕನಸುಗಳು ಇರುತ್ತವೆ, ಇದರ ಜೊತೆಗೆ ಕ್ರೆಡಿಟ್‌ ಕಾರ್ಡ್‌ ಹೊಂದಬೇಕು ಅನ್ನೋ ಬಯಕೆ ಕೂಡ ತಪ್ಪೇನಲ್ಲ.

ಆದ್ರೆ ಎಷ್ಟೋ ಬಾರಿ ಕ್ರೆಡಿಟ್‌ ಕಾರ್ಡ್‌ ಬಳಸಿ ನಂತರ ಬಿಲ್‌ ಕಟ್ಟಲಾಗದೇ ಒದ್ದಾಡುವ ಸ್ಥಿತಿ ಬರಬಹುದು. ಈ ಸಂದರ್ಭದಲ್ಲಿ ಇಎಂಐ ಆಯ್ಕೆಮಾಡಿಕೊಳ್ಳೋದು ಸೂಕ್ತ. ಆದ್ರೆ ಈ ವಹಿವಾಟು ನ್ಯಾಯಯುತವಾಗಿರಬೇಕು, ಬುದ್ಧಿವಂತಿಕೆಯಿಂದ ಕೂಡಿರಬೇಕು.

ಸಂಪೂರ್ಣ ಬಿಲ್ ಅಥವಾ ಅದರ ಒಂದು ಭಾಗವನ್ನು ಕಡಿಮೆ ಬಡ್ಡಿ ವೆಚ್ಚದಲ್ಲಿ ಮತ್ತು ಆರಾಮದಾಯಕ ಅವಧಿಗೆ ಸಮಾನವಾದ ಮಾಸಿಕ ಕಂತುಗಳಾಗಿ (EMI) ಪರಿವರ್ತಿಸಲು ಬಳಕೆದಾರರಿಗೆ ಕ್ರೆಡಿಟ್‌ ಕಾರ್ಡ್‌ ವಿತರಕರು ಅವಕಾಶ ಮಾಡಿಕೊಡುತ್ತಾರೆ.

ಈ ರೀತಿ ಮಾಡುವುದರಿಂದ ದೊಡ್ಡ ಮೊತ್ತದ ಖರೀದಿ ಮಾಡಿದ್ರೂ ಒಮ್ಮೆಲೇ ನಿಮ್ಮ ಜೇಬಿಗೆ ಹೆಚ್ಚು ಹೊರೆಯಾಗುವುದಿಲ್ಲ. ಇಎಂಐ ಆಗಿ ಪರಿವರ್ತಿಸುವ ಅವಕಾಶ ಕೊಟ್ಟಿರುವುದರಿಂದ್ಲೇ ಗ್ರಾಹಕರು ಕ್ರೆಡಿಟ್‌ ಕಾರ್ಡ್‌ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಆದ್ರೆ ಕಾಲಕಾಲಕ್ಕೆ ಇಎಂಐ ಪಾವತಿಸದೇ ಇದ್ದರೆ ಅದು ನಿಮಗೆ ದೊಡ್ಡ ಹೊರೆಯಾಗುವುದರಲ್ಲಿ ಸಂದೇಹವೇ ಇಲ್ಲ. ಹಾಗಾಗಿ ಕ್ರೆಡಿಟ್‌ ಕಾರ್ಡ್‌ ಅನ್ನು ಇಎಂಐ ಆಗಿ ಪರಿವರ್ತಿಸುವ ಮುನ್ನ ಕೆಲ ಅಂಶಗಳು ನಿಮ್ಮ ಗಮನದಲ್ಲಿರಲಿ.

• EMI ಯೋಜನೆಗಳು ನಾಮಮಾತ್ರ ಪ್ರಕ್ರಿಯೆ ಶುಲ್ಕಕ್ಕೆ ಒಳಪಟ್ಟಿರುತ್ತವೆ. ಇದಲ್ಲದೆ, ಅನೇಕ ಬ್ಯಾಂಕ್‌ಗಳು ಶೂನ್ಯ EMI ಕೊಡುಗೆಗಳನ್ನು ಸಹ ಒದಗಿಸುತ್ತವೆ, ಅದರ ಲಾಭವನ್ನು ನೀವು ಪಡೆಯಬಹುದು. ಆಯ್ಕೆ ಮಾಡುವ ಮೊದಲು ದಯವಿಟ್ಟು ಪರಿಶೀಲಿಸಿ.

• ಅವಧಿಯನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ. ಗ್ರಾಹಕರಿಗೆ ತಮ್ಮ ಖರೀದಿಗಳ ಮರುಪಾವತಿಯ ಅವಧಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ಮರುಪಾವತಿಗೆ ಅನುಮತಿಸಲಾದ ವಿಶಿಷ್ಟ ಅವಧಿಯು 3 ತಿಂಗಳುಗಳು, 6 ತಿಂಗಳುಗಳು, 9 ತಿಂಗಳುಗಳು ಮತ್ತು 12 ತಿಂಗಳುಗಳವರೆಗೆ ಇರಬಹುದು.

• ನೀವು ಬಹು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ, ನೀವು ಅವುಗಳ ಮೇಲೆ ನೀಡಲಾಗುವ ಬಡ್ಡಿ ದರಗಳನ್ನು ಹೋಲಿಸಬೇಕು.

• ನೀವು EMI ಸೌಲಭ್ಯವನ್ನು ಬಳಸಿದಾಗ, ಕ್ರೆಡಿಟ್ ಮಿತಿಯ ವಿರುದ್ಧ ಖರೀದಿ ಮೊತ್ತವನ್ನು ನಿರ್ಬಂಧಿಸಲಾಗುತ್ತದೆ. ಆದ್ದರಿಂದ, ನೀವು EMI ಗಳನ್ನು ಪಾವತಿಸುವವರೆಗೆ ನಿಮ್ಮ ಲಭ್ಯವಿರುವ ಕ್ರೆಡಿಟ್ ಮಿತಿಯನ್ನು ಕಡಿಮೆ ಮಾಡಲಾಗುತ್ತದೆ.

• ನೀವು EMI ಪರಿವರ್ತನೆಯನ್ನು ಆರಿಸಿಕೊಂಡಿದ್ದರೆ, ನೀವು ಸಂಪೂರ್ಣ ಬಾಕಿ ಮೊತ್ತವನ್ನು ನಿಗದಿತ ದಿನಾಂಕದೊಳಗೆ ಪಾವತಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಪಾವತಿ ಮಾಡದೇ ಇದ್ದರೆ ಅಥವಾ ತಡವಾದರೆ ಹೆಚ್ಚಿನ ಶುಲ್ಕ ಕಟ್ಟಬೇಕಾಗಬಹುದು.

• ನೀವು ಅವಧಿಗೆ ಮೊದಲು ಬಾಕಿಯನ್ನು ತೆರವುಗೊಳಿಸಲು ಬಯಸಿದರೆ ಬ್ಯಾಂಕ್‌ಗಳು ನಿಮಗೆ ಪೂರ್ವ-ಪಾವತಿ ಶುಲ್ಕವನ್ನು ವಿಧಿಸಬಹುದು.

• ಇಂಟ್ರೆಸ್ಟ್‌ ಕಂಪೋನೆಂಟ್‌, ಪ್ರೊಸೆಸಿಂಗ್‌ ಶುಲ್ಕ ಹಾಗೂ ಅವಧಿಗೂ ಮುನ್ನ ಕ್ಲೋಸ್‌ ಮಾಡಿದರೆ ಅದಕ್ಕೂ ಶುಲ್ಕ ವಿಧಿಸಲಾಗುತ್ತದೆ. ಸೇವಾ ಶುಲ್ಕಗಳು ಇವನ್ನೆಲ್ಲ ಓಳಗೊಂಡಿರುತ್ತವೆ.

• ಚಿನ್ನ ಮತ್ತು ಆಭರಣ ಖರೀದಿಯಲ್ಲಿ ಈ ಸೌಲಭ್ಯ ಇರುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...