ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಅಥವಾ ಕೋವಿಡ್ ಬಂದ ನಂತರ ಯೋಗ, ಪ್ರಾಣಾಯಾಮ, ವಾಕ್ ಮಾಡಬೇಕೇ ? ಒಂದು ವೇಳೆ ಎಕ್ಸರ್ಸೈಸ್ ಮಾಡುವುದರಿಂದ ಯಾವ ರೀತಿ ಪರಿಣಾಮಗಳು ಬೀರುತ್ತವೆ ? ಮಾಡುವುದಾದರೆ ಯಾವ ರೀತಿ ಎಕ್ಸರ್ಸೈಸ್ ಮಾಡಬೇಕು ? ಎಂಬಿತ್ಯಾದಿ ಗೊಂದಲಗಳಿಗೆ ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ಉತ್ತರ ನೀಡಿದ್ದಾರೆ.
BIG BREAKING: ಕೇಂದ್ರ ಸಚಿವರಾಗಿ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್ ಪ್ರಮಾಣ ಸ್ವೀಕಾರ – ಇಲ್ಲಿದೆ ನೂತನ ಮಂತ್ರಿಗಳ ಪಟ್ಟಿ
ಕೋವಿಡ್ ಇದ್ದಾಗ ಹಾಗೂ ನಂತರದಲ್ಲಿ ನಮ್ಮ ಪಲ್ಸ್ ರೇಟ್, ಹಾರ್ಟ್ ಬೀಟ್ ಹೆಚ್ಚಾಗಿರುತ್ತದೆ. ಉಸಿರಾಟದ ತೊಂದರೆ ಇರುತ್ತದೆ. ಇಂತ ಸಮಯದಲ್ಲಿ ವ್ಯಾಯಾಮ, ವಾಕಿಂಗ್ ಮಾಡುವುದರಿಂದ ಹಾರ್ಟ್ ಬೀಟ್ ಇನ್ನಷ್ಟು ಹೆಚ್ಚುವುದಲ್ಲದೇ ಉಸಿರಾಟದ ತೊಂದರೆಯೂ ಅಧಿಕವಾಗುತ್ತದೆ.
ಎದೆನೋವು, ನ್ಯುಮೋನಿಯಾದಂತಹ ಕೋವಿಡ್ ಲಕ್ಷಣವಿದ್ದಾಗ ಪ್ರಾಣಾಯಾಮ, ವ್ಯಾಯಾಮಗಳನ್ನು ಮಾಡುವುದರಿಂದ ಏನೆಲ್ಲ ಅಪಾಯಗಳು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ ಎಂಬುದನ್ನು ಎಳೆ ಎಳೆಯಾಗಿ ಡಾ. ರಾಜು ವಿವರಿಸಿದ್ದಾರೆ. ಡಾ. ರಾಜು ಅವರ ಈ ಹೊಸ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.