alex Certify ʼಕೊತ್ತಂಬರಿಕಾಳುʼ ನೆನೆಸಿದ ನೀರು ಕುಡಿದು ಈ ಆರೋಗ್ಯ ಲಾಭ ಪಡೆಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊತ್ತಂಬರಿಕಾಳುʼ ನೆನೆಸಿದ ನೀರು ಕುಡಿದು ಈ ಆರೋಗ್ಯ ಲಾಭ ಪಡೆಯಿರಿ

ಸಾಂಬಾರು ಪದಾರ್ಥಗಳಲ್ಲಿ ಬಳಸುವ ಬದಲಾಗಿಯೂ ಕೊತ್ತಂಬರಿ ಕಾಳಿನಿಂದ ಹಲವು ಪ್ರಯೋಜನಗಳಿವೆ. ಕೊತ್ತಂಬರಿ ನೆನೆಸಿದ ನೀರನ್ನು ಕುಡಿಯುವುದರಿಂದ ಹತ್ತು ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ವೈದ್ಯರು ಮಧುಮೇಹಿಗಳಿಗೆ ಕೊತ್ತಂಬರಿಯನ್ನು ಹೆಚ್ಚಾಗಿ ಬಳಸಲು ಸೂಚಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಎಂದರೆ ಕೊತ್ತಂಬರಿಗೆ ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ಇದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿ ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ.

ಮಹಿಳೆಯರಲ್ಲಿ 40 ವರ್ಷ ಕಳೆದ ಬಳಿಕ ಬಿಳಿಸ್ರಾವವಾಗುತ್ತಿರುತ್ತದೆ. ಇದರ ನಿವಾರಣೆಗೆ ನೀವು ಒಂದು ವಾರದ ತನಕ ಬಿಡದೆ ಕೊತ್ತಂಬರಿ ಕಾಳುಗಳನ್ನು ನೆನೆಸಿಟ್ಟು ಅದರ ನೀರನ್ನು ಮಾತ್ರ ಸೋಸಿ ಕುಡಿಯಿರಿ.

ಇದು ಮೂಳೆಗಳನ್ನು ದೃಢಪಡಿಸುತ್ತದೆ. ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ. ಅಜೀರ್ಣತೆ, ಅಸಿಡಿಟಿ ಸಮಸ್ಯೆಯನ್ನು ನಿವಾರಿಸುತ್ತದೆ. ಬೇಧಿ, ವಾಕರಿಕೆಯ ಲಕ್ಷಣಗಳಂಥ ಆರೋಗ್ಯ ಸಮಸ್ಯೆಗಳಿಂದಲೂ ಮುಕ್ತಿ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...