alex Certify ʼಕೆಜಿಎಫ್ ಮಾಸ್ಟರ್ ಪೀಸ್, ಪ್ರಶಾಂತ್ ನೀಲ್ ನೆಕ್ಸ್ಟ್ ಲೆವೆಲ್ ನಿರ್ದೇಶಕ: ನಟ ಉಪೇಂದ್ರ ಪ್ರಶಂಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೆಜಿಎಫ್ ಮಾಸ್ಟರ್ ಪೀಸ್, ಪ್ರಶಾಂತ್ ನೀಲ್ ನೆಕ್ಸ್ಟ್ ಲೆವೆಲ್ ನಿರ್ದೇಶಕ: ನಟ ಉಪೇಂದ್ರ ಪ್ರಶಂಸೆ

ಕೆಜಿಎಫ್ ಸಿನಿಮಾ ಬಗ್ಗೆ ಕನ್ನಡ ಚಿತ್ರರಂಗದವರು ಹೆಚ್ಚು ಮಾತನಾಡಿಲ್ಲ ಎನ್ನುವ ವಿಚಾರ ಸದ್ಯ ಕೇಳಿ ಬರುತ್ತಿವೆ. ಆದರೆ ಈ ಎಲ್ಲಾ ವಾದಕ್ಕೆ ಅಪವಾದ ಎನ್ನುವಂತೆ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರು ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ನಟ ಉಪೇಂದ್ರ ಅವರು ತಮ್ಮ ಫೇಸ್ಬುಕ್, ಟ್ವಿಟ್ಟರ್ ಖಾತೆಯಲ್ಲಿ ಕೆಜಿಎಫ್ ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ. ‘ ನಾನು ಕೆಜಿಎಫ್ ಚಾಪ್ಟರ್ 2 ಸಿನಿಮಾ ನೋಡಿದೆ. ಎಂಥಾ! ಮಾಸ್ಟರ್ ಪೀಸ್ ಸಿನಿಮಾ! ಪ್ರಶಾಂತ್ ನೀಲ್ ನೀವು ನೆಕ್ಸ್ಟ್ ಲೆವೆಲ್ ನಿರ್ದೇಶಕ, ಅಚ್ಚರಿ ಹುಟ್ಟಿಸುವ ನಿರ್ದೇಶನ, ಅತ್ಯುತ್ತಮ ಚಿತ್ರಕಥೆ, ಸಂಭಾಷಣೆ, ಸಂಗೀತ, ಕಲಾ ವಿನ್ಯಾಸ ಎಂದಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಬಗ್ಗೆಯೂ ಹೊಗಳಿದ್ದು, ನಟ ಯಶ್ ಅವರನ್ನು ಮುಕುಟ ಮಣಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಿಂದೆಂದೂ ಕಾಣದಷ್ಟು ಅದ್ಭುತವನ್ನು ಕಣ್ಣುಗಳಿಗೆ ಉಣಬಡಿಸಿದ್ದಾರೆ ಕ್ಯಾಮೆರಾ ಮ್ಯಾನ್ ಭುವನ್ ಗೌಡ ಎಂದಿದ್ದಾರೆ. ತೆರೆ ಮೇಲೆ ರವೀನಾ ಟಂಡನ್ ಅದ್ಭುತವಾಗಿ ನಟಿಸಿದ್ದಾರೆ. ಅಧೀರನಾಗಿ ಸಂಜಯ್ ದತ್ ಅಬ್ಬರಿಸಿದ್ದಾರೆ’ ಒಟ್ಟಿನಲ್ಲಿ ಈ ಬೃಹತ್ ಕಲಾಕೃತಿಯನ್ನು ತೆರೆ ಮೇಲೆ ತಂದ ತಂಡದ ಪ್ರತಿಯೊಬ್ಬರಿಗೂ ಉಪೇಂದ್ರ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಇನ್ನೂ ಉಪೇಂದ್ರ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ‘ಉಪ್ಪಿ ಸರ್ ನಿಮ್ಮಿಂದ ಕೆಜಿಎಫ್‌ ಗಿಂತ ದೊಡ್ಡ ಸಿನಿಮಾವನ್ನು ನಿರೀಕ್ಷೆ ಮಾಡುತ್ತಿದ್ದೇವೆ’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನೂ ಈಗಾಗಲೇ ಭಾರತದ ಶ್ರೇಷ್ಠ ನಿರ್ದೇಶಕರ ಸಾಲಿಗೆ ಸೇರಿರುವ ಪ್ರಶಾಂತ್ ನೀಲ್ ಮೊನ್ನೆಯಷ್ಟೇ ಖಾಸಗಿ ಯೂಟ್ಯೂಬ್ ವಾಹಿನಿಯಲ್ಲಿ ಉಪೇಂದ್ರ ಅವರ ಎ, ಉಪೇಂದ್ರ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನೂ ಬಾಲಿವುಡ್ ನಲ್ಲಿ ಬ್ಯುಸಿ ಇದ್ದ ರವೀನಾ ಟಂಡನ್ ಅವರನ್ನು ಸ್ಯಾಂಡಲ್ವುಡ್‌ ಗೆ ಮೊದಲು ಕರೆತಂದ ಹೆಗ್ಗಳಿಕೆ ಉಪೇಂದ್ರ ಅವರದ್ದು. ಸದ್ಯ ಉಪೇಂದ್ರ ಅವರ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಸಾಕಷ್ಟು ಕುತೂಹಲವನ್ನೂ ಕೆರಳಿಸಿದೆ.

ಒಟ್ಟಿನಲ್ಲಿ ಕೆಜಿಎಫ್ ಹವಾ ದಿನೇ ದಿನೇ ಜೋರಾಗುತ್ತಲೇ ಇದೆ. ಇನ್ನೂ ಏಪ್ರಿಲ್ 14 ರಂದು ತೆರೆಗೆ ಬಂದ ಕೆಜಿಎಫ್ ಸಿನಿಮಾ 7 ದಿನಗಳಲ್ಲಿ 720 ಕೋಟಿ ಗಳಿಕೆ ಕಂಡಿದೆ. ಸದ್ಯ ಭಾರತದಲ್ಲಿ ಈಗೇನಿದ್ರೂ ರಾಕಿ ಬಾಯ್ದೇ ಹವಾ…!

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...