alex Certify ಕಪ್ಪು ಮಚ್ಚೆಗಳ ಸಮಸ್ಯೆಗೆ ಇಲ್ಲಿದೆ ಒಂದಷ್ಟು ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಪ್ಪು ಮಚ್ಚೆಗಳ ಸಮಸ್ಯೆಗೆ ಇಲ್ಲಿದೆ ಒಂದಷ್ಟು ಟಿಪ್ಸ್

ಕಪ್ಪು ಮಚ್ಚೆಗಳು ಬರುವುದಕ್ಕೆ ಹಲವಾರು ಕಾರಣಗಳಿವೆ. ಮುಖದಲ್ಲಿ ಚಿಕ್ಕ ಮಚ್ಚೆ ಕಾಣಿಸಿದರು ಮಹಿಳೆಯರು ಆತಂಕಕ್ಕೊಳಗಾಗುತ್ತಾರೆ. ಇನ್ನೂ ಮೂಗು, ಮೊಣಕೈ, ಮೊಣಕಾಲು, ಕುತ್ತಿಗೆ ಮತ್ತಿತರ ಭಾಗಗಳಲ್ಲಿ ಚರ್ಮ ಕಪ್ಪಾಗಿ ಬದಲಾದರೆ ತೊಂದರೆ ಅನಿಸುತ್ತದೆ. ಇದರಿಂದ ಮುಕ್ತಿ ಪಡೆಯಬೇಕಾದರೆ ಈ ಸಲಹೆಗಳನ್ನು ಅನುಸರಿಸಿ ನೋಡಿ.

* ಹುಳಿಯಾದ ಮೊಸರಿನಲ್ಲಿ ಬಾರ್ಲಿ ಹಿಟ್ಟನ್ನು ಕಲಸಿ ಪೇಸ್ಟ್ ಆಗಿ ಮಾಡಿ ಮಚ್ಚೆಗಳ ಮೇಲೆ ಲೇಪನ ಮಾಡಬೇಕು. ಪ್ರತಿ ದಿನ ಹೀಗೆ ಮಾಡಿ 15 ನಿಮಿಷಗಳ ನಂತರ ತೊಳೆಯಬೇಕು.

* ನಿದ್ರೆ ಮಾಡುವ ಮುನ್ನ ಆಪಲ್ ಸೀಡರ್ ವಿನೆಗರ್ ಅನ್ನು ಮಚ್ಚೆಗಳ ಮೇಲೆ ಹಚ್ಚಿ ಬೆಳಗ್ಗೆ ತೊಳೆಯಬೇಕು.

* ಎರಡು ದಿನಕ್ಕೊಮ್ಮೆ ಟೊಮ್ಯಾಟೊ ರಸವನ್ನು ಮಚ್ಚೆಗಳ ಮೇಲೆ ಹಚ್ಚಿ ಅರ್ಧ ಗಂಟೆಯ ನಂತರ ತೊಳೆಯಬೇಕು.

* ಅಲೋವೆರಾ ಜೆಲ್ ಅನ್ನು ಲೇಪನ ಮಾಡಿಕೊಂಡರೆ ಈ ಸಮಸ್ಯೆ ಕಡಿಮೆಯಾಗುತ್ತದೆ.

* ಕೊಬ್ಬರಿ ಎಣ್ಣೆಯನ್ನು ಸಮಸ್ಯೆ ಇರುವ ಕಡೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ಮಚ್ಚೆಗಳ ಸಮಸ್ಯೆ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...