ಕಪ್ಪು ಮಚ್ಚೆಗಳು ಬರುವುದಕ್ಕೆ ಹಲವಾರು ಕಾರಣಗಳಿವೆ. ಮುಖದಲ್ಲಿ ಚಿಕ್ಕ ಮಚ್ಚೆ ಕಾಣಿಸಿದರು ಮಹಿಳೆಯರು ಆತಂಕಕ್ಕೊಳಗಾಗುತ್ತಾರೆ. ಇನ್ನೂ ಮೂಗು, ಮೊಣಕೈ, ಮೊಣಕಾಲು, ಕುತ್ತಿಗೆ ಮತ್ತಿತರ ಭಾಗಗಳಲ್ಲಿ ಚರ್ಮ ಕಪ್ಪಾಗಿ ಬದಲಾದರೆ ತೊಂದರೆ ಅನಿಸುತ್ತದೆ. ಇದರಿಂದ ಮುಕ್ತಿ ಪಡೆಯಬೇಕಾದರೆ ಈ ಸಲಹೆಗಳನ್ನು ಅನುಸರಿಸಿ ನೋಡಿ.
* ಹುಳಿಯಾದ ಮೊಸರಿನಲ್ಲಿ ಬಾರ್ಲಿ ಹಿಟ್ಟನ್ನು ಕಲಸಿ ಪೇಸ್ಟ್ ಆಗಿ ಮಾಡಿ ಮಚ್ಚೆಗಳ ಮೇಲೆ ಲೇಪನ ಮಾಡಬೇಕು. ಪ್ರತಿ ದಿನ ಹೀಗೆ ಮಾಡಿ 15 ನಿಮಿಷಗಳ ನಂತರ ತೊಳೆಯಬೇಕು.
* ನಿದ್ರೆ ಮಾಡುವ ಮುನ್ನ ಆಪಲ್ ಸೀಡರ್ ವಿನೆಗರ್ ಅನ್ನು ಮಚ್ಚೆಗಳ ಮೇಲೆ ಹಚ್ಚಿ ಬೆಳಗ್ಗೆ ತೊಳೆಯಬೇಕು.
* ಎರಡು ದಿನಕ್ಕೊಮ್ಮೆ ಟೊಮ್ಯಾಟೊ ರಸವನ್ನು ಮಚ್ಚೆಗಳ ಮೇಲೆ ಹಚ್ಚಿ ಅರ್ಧ ಗಂಟೆಯ ನಂತರ ತೊಳೆಯಬೇಕು.
* ಅಲೋವೆರಾ ಜೆಲ್ ಅನ್ನು ಲೇಪನ ಮಾಡಿಕೊಂಡರೆ ಈ ಸಮಸ್ಯೆ ಕಡಿಮೆಯಾಗುತ್ತದೆ.
* ಕೊಬ್ಬರಿ ಎಣ್ಣೆಯನ್ನು ಸಮಸ್ಯೆ ಇರುವ ಕಡೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ಮಚ್ಚೆಗಳ ಸಮಸ್ಯೆ ಕಡಿಮೆಯಾಗುತ್ತದೆ.