
ಕಡಕ್ ಮಾಲ್ ಥಾ ಎಂಬ ಸಾಲು ಇರುವ ಮೆಮೆ ರಚಿಸಿರುವ ಪೊಲೀಸರು ಮಾದಕ ವಸ್ತು ಜಾಲಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ʼಫಿರ್ ಹೇರಾ ಪೇರಿʼ ಚಿತ್ರದಲ್ಲಿನ ಒಂದು ಡೈಲಾಗ್ “ಕಡಕ್ ಮಾಲ್ ಹೈ”, ಅದನ್ನು ಆಧಾರವಾಗಿಟ್ಟುಕೊಂಡು ಅಸ್ಸಾಂ ಪೊಲೀಸರು “ಕಡಕ್ ಮಾಲ್ ಥಾ” ಎಂದು ಬದಲಿಸಿದ್ದು, ಈ ಸಾಲಿನ ಹಿಂದೆ ಮಾದಕ ವಸ್ತು ನಾಶಪಡಿಸುತ್ತಿರುವ ಚಿತ್ರವಿದೆ.
ಫಿರ್ ಹೇರಾ ಪೇರಿ ಚಿತ್ರದಲ್ಲಿನ ಒಂದು ಸಂದರ್ಭದಲ್ಲಿ ಕಲಾವಿದ ಮನೋಜ್ ಜೋಶಿ “ಕಡಕ್ ಮಾಲ್ ಹೈ” ಎಂದು ಹೇಳುತ್ತಾರೆ. ಆ ಸನ್ನಿವೇಶ ನೆನಪಿಸುವಂತೆ ಮೆಮೆ ರಚಿಸಲಾಗಿದೆ. ಡ್ರಗ್ ಮಾಫಿಯಾ ಗುರಿಯಾಗಿಸಿ ಎಚ್ಚರಿಕೆ ನೀಡಿರುವುದು ಕಂಡುಬರುತ್ತದೆ.
ನೆಟ್ಟಿಗರು ಇದನ್ನುಕಂಡು ಅಚ್ಚರಿ ವ್ಯಕ್ತಪಡಿಸಿ, ಪೊಲೀಸರ ಕ್ರಿಯಾಶೀಲತೆಗೆ ಶಬ್ಬಾಸ್ಗಿರಿ ನೀಡಿದ್ದಾರೆ.