alex Certify ʼಕಚ್ಚಾ ಬಾದಾಮ್ʼ ನಂತರ ದ್ರಾಕ್ಷಿ ಮಾರಾಟಗಾರನ ಹಾಡಿನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಚ್ಚಾ ಬಾದಾಮ್ʼ ನಂತರ ದ್ರಾಕ್ಷಿ ಮಾರಾಟಗಾರನ ಹಾಡಿನ ವಿಡಿಯೋ ವೈರಲ್

ದೇಶದಲ್ಲಿ ಕಚ್ಚಾ ಬಾದಮ್ ಟ್ರೆಂಡ್ ಕ್ರೇಜಿ ವೈರಲ್ ಆದ ನಂತರ, ಅನೇಕ ಜನರು ಹಣ್ಣು ಮಾರಾಟಗಾರರ ಅದೇ ರೀತಿಯ ಆಕರ್ಷಕ ಹಾಡುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಚ್ಚಾ ಬಾದಮ್ ಹಾಡನ್ನು ಭುವನ್ ಬಡ್ಯಾಕರ್ ಸಂಯೋಜಿಸಿದ್ದಾರೆ. ಕಡಲೆಕಾಯಿಯನ್ನು ಮಾರಾಟ ಮಾಡುತ್ತಾ ಖರೀದಿದಾರರನ್ನು ಆಕರ್ಷಿಸಲು ಅವರು ಈ ಹಾಡನ್ನು ಹಾಡಿದ್ದರು. ಈ ಹಾಡು ದೇಶದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಅಂತಹುದೇ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡಿದ್ದು, ಹಣ್ಣು ಮಾರಾಟಗಾರರೊಬ್ಬರು ದ್ರಾಕ್ಷಿಯನ್ನು ಮಾರುತ್ತಾ ಹಾಡಿದ್ದಾರೆ.

ವೈರಲ್ ಆಗಿರುವ ಕಡಲೆಕಾಯಿ ಮಾರಾಟಗಾರನಂತೆಯೇ ಇದೀಗ ವಯಸ್ಸಾದ ವ್ಯಕ್ತಿಯೊಬ್ಬರು ತನ್ನ ದ್ರಾಕ್ಷಿಯನ್ನು ಮಾರಲು ವಿಶಿಷ್ಟವಾಗಿ ಹಾಡಿದ್ದಾರೆ. ಕಪ್ಪು ದ್ರಾಕ್ಷಿ ಮತ್ತು ಪೇರಲ ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ವ್ಯಕ್ತಿಯು, ಕೈಯಲ್ಲಿ ಚಹಾವನ್ನು ಹಿಡಿದುಕೊಂಡು ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದ್ದಾನೆ. ಲೇಲೋ 15 ರೂಪಾಯಿಗೆ 12 ಅಂಗೂರ್ (12 ದ್ರಾಕ್ಷಿಯನ್ನು 15 ರೂಪಾಯಿಗೆ ಖರೀದಿಸಿ) ಎಂದು ಹಾಡಿದ್ದಾನೆ. ದ್ರಾಕ್ಷಿ ಮಾರಾಟಗಾರನ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಭಾರಿ ವೈರಲ್ ಆಗಿದೆ. ಜನರು ಈತನನ್ನು ಭುವನ್ ಬಡ್ಯಾಕರ್‌ಗೆ ಹೋಲಿಸುತ್ತಿದ್ದಾರೆ. ಇನ್ನು ಕೆಲವರು ಈ ಹಾಡಿನ ರೀಮಿಕ್ಸ್ ಆವೃತ್ತಿ ಬಂದ್ರೆ ಕೆಲವೇ ಸಮಯದಲ್ಲಿ ಜನರು ನೃತ್ಯ ಮಾಡಲಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...