alex Certify ʼಕಚ್ಚಾ ಬಾದಮ್ʼ ಹಾಡಿಗೆ ಮೊಮ್ಮಕ್ಕಳೊಂದಿಗೆ ವೃದ್ಧೆಯ ಬಿಂದಾಸ್ ಡಾನ್ಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಚ್ಚಾ ಬಾದಮ್ʼ ಹಾಡಿಗೆ ಮೊಮ್ಮಕ್ಕಳೊಂದಿಗೆ ವೃದ್ಧೆಯ ಬಿಂದಾಸ್ ಡಾನ್ಸ್….!

ಕಡಲೆಕಾಯಿ ಮಾರಾಟಗಾರ ಹಾಡಿರುವ ಕಚ್ಚಾ ಬಾದಮ್ ಹಾಡಿನ ಟ್ರೆಂಡ್ ಇಂಟರ್ನೆಟ್‌ನಲ್ಲಿ ಕ್ರೇಜಿ ವೈರಲ್ ಆಗಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಈ ಹಾಡನ್ನು ಇಷ್ಟಪಟ್ಟಿದ್ದು, ತಮ್ಮದೇ ಶೈಲಿಯಲ್ಲಿ ನೃತ್ಯ ಮಾಡಿದ್ದಾರೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಈ ಬೆಂಗಾಲಿ ಹಾಡಿಗೆ ಸ್ಟೆಪ್ಸ್ ಹಾಕಿರುವ ಮತ್ತೊಂದು ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.

ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ‘ಶೂಟರ್ ದಾದಿ’ ಪ್ರಕಾಶಿ ತೋಮರ್ ತನ್ನ ಮೊಮ್ಮಗಳು ಎಂದು ತೋರುವ ಇಬ್ಬರು ಹುಡುಗಿಯರೊಂದಿಗೆ ನೃತ್ಯ ಮಾಡಿದ್ದಾರೆ. ವಯಸ್ಸು ದೇಹಕ್ಕಷ್ಟೇ, ನೃತ್ಯ/ಖುಷಿಯಾಗಿರಲು ವಯಸ್ಸಿನ ಹಂಗಿಲ್ಲ ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ. ಇಬ್ಬರು ಹುಡುಗಿಯರೊಂದಿಗೆ ವೃದ್ಧೆ ಕಚ್ಚಾ ಬಾದಾಮ್ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಜನರು ವೃದ್ಧೆಯ ನೃತ್ಯವನ್ನು ಮೆಚ್ಚಿ ಕೊಂಡಾಡಿದ್ದಾರೆ. ಈ ವಿಡಿಯೋ ನೋಡಿದ ಭೂಮಿ ಪೆಡ್ನೇಕರ್ ಅವರು ಕೂಡ ವೃದ್ಧೆಯ ನೃತ್ಯವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಾರೆ. ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಈ ಹಾಡನ್ನು ರಚಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕಚಾ ಬಾದಮ್ ಹಾಡು ಟ್ರೆಂಡಿಂಗ್ ಶುರುವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...