alex Certify ʼಕಚಾ ಬಾದಮ್ʼ ಹಾಡಿದ ಇಂಟರ್ನೆಟ್ ಸೆನ್ಸೇಷನ್ ರಾನು ಮೊಂಡಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಚಾ ಬಾದಮ್ʼ ಹಾಡಿದ ಇಂಟರ್ನೆಟ್ ಸೆನ್ಸೇಷನ್ ರಾನು ಮೊಂಡಲ್

This video of Ranu Mondal dressed as bride and singing Kacha Badam is going viral. (Image courtesy: Facebook)ಇಂಟರ್ನೆಟ್ ಸೆನ್ಸೇಷನ್ ರಾನು ಮೊಂಡಲ್ ವಧುವಿನಂತೆ ಉಡುಪು ಧರಿಸಿದ್ದು, ವೈರಲ್ ಆದ ʼಕಚಾ ಬಾದಾಮ್ʼ ಹಾಡನ್ನು ಹಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ರಾನು ಮೊಂಡಲ್ ಅವರು ಕೆಂಪು ಸೀರೆ ಮತ್ತು ಆಭರಣ ತೊಟ್ಟಿದ್ದು, ಬಂಗಾಳಿ ವಧುವಿನಂತೆ ಅಲಂಕೃತರಾಗಿದ್ದಾರೆ. ಅಲ್ಲದೆ, ಅವರು ವೈರಲ್ ಬೆಂಗಾಲಿ ಹಾಡು ʼಕಚಾ ಬದಮ್ʼ ಅನ್ನು ಹಾಡಿದ್ದಾರೆ.

ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಅವರ ಹಾಡು ಕೆಲವು ದಿನಗಳ ಹಿಂದೆ ಆನ್‌ಲೈನ್‌ನಲ್ಲಿ ತೀವ್ರವಾಗಿ ಟ್ರೆಂಡಿಂಗ್ ಆಗಿತ್ತು. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಈ ಹಾಡನ್ನು ಎಲ್ಲರೂ ಇಷ್ಟಪಟ್ಟಿದ್ದರು. ಇದೀಗ ಈ ಹಾಡನ್ನು ರಾನು ಮೊಂಡಲ್ ಹಾಡಿದ್ದು, ಇಂಟರ್ನೆಟ್ ನಲ್ಲಿ ರೌಂಡ್ ಹೊಡೆಯುತ್ತಿದೆ. ಈ ಹಾಡು ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇಂಟರ್ನೆಟ್ ಸೆನ್ಸೇಷನ್ ಆಗಿರುವ ರಾನು ಮೊಂಡಲ್ ಯಾರೆಂಬುದು ಬಹುಶಃ ನಿಮಗೆ ತಿಳಿದಿರಬಹುದು. 1972 ರ ʼಏಕ್ ಪ್ಯಾರ್ ಕಾ ನಗ್ಮಾ ಹೈʼ ಹಾಡನ್ನು ಹಾಡುವ ವಿಡಿಯೋವು 2019ರ ಆಗಸ್ಟ್ ನಲ್ಲಿ ವೈರಲ್ ಆದ ನಂತರ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ. ಕೂಡಲೇ ಭಾರಿ ಖ್ಯಾತಿ ಗಳಿಸಿದ ಇವರನ್ನು ಸಂಗೀತ ನಿರ್ದೇಶಕ ಹಿಮೇಶ್ ರೇಶಮಿಯಾ ಗುರುತಿಸಿದ್ದಾರೆ. ಅವರ ಹ್ಯಾಪಿ ಹಾರ್ಡಿ ಮತ್ತು ಹೀರ್ ಚಲನಚಿತ್ರಕ್ಕಾಗಿ ರಾನು ಮೊಂಡಲ್ ರಿಂದ ಹಾಡುಗಳನ್ನು ಹಾಡಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...