alex Certify ʼಏಲಕ್ಕಿʼ ಪುಡಿಯಿಂದ ಸಿಗುವ ಆರೋಗ್ಯ ಪ್ರಯೋಜನಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಏಲಕ್ಕಿʼ ಪುಡಿಯಿಂದ ಸಿಗುವ ಆರೋಗ್ಯ ಪ್ರಯೋಜನಗಳು

ಸುವಾಸನೆ ಭರಿತ ಏಲಕ್ಕಿ ಕೇವಲ ಅಡುಗೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು.

ಸಮಯ ಸಿಕ್ಕಾಗ ಏಲಕ್ಕಿ ಪುಡಿಯನ್ನು ಮಾಡಿಟ್ಟುಕೊಂಡರೆ ಕೆಲ ಆರೋಗ್ಯ ಸಮಸ್ಯೆಗಳಿಂದ ತಕ್ಷಣ ಪರಿಹಾರ ಕಂಡುಕೊಳ್ಳಬಹುದು. ಅದು ಹೇಗೆ ಅಂತ ತಿಳಿಯಿರಿ.

* ಬಾಯಿ ಹುಣ್ಣು ಗುಣವಾಗಬೇಕೆಂದರೆ ಏಲಕ್ಕಿ ಪುಡಿಗೆ ಜೇನುತುಪ್ಪ ಸೇರಿಸಿ ಸೇವಿಸಿ.

* ಉರಿ ಮೂತ್ರವಿದ್ದಲ್ಲಿ ಏಲಕ್ಕಿ ಪುಡಿಯ ಜೊತೆ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಸೇವಿಸಿದರೆ ಉರಿ ಮೂತ್ರ ಕಡಿಮೆಯಾಗುತ್ತದೆ.

ʼಕಿತ್ತಳೆ ಹಣ್ಣುʼ ಸಿಪ್ಪೆ ತೆಗೆದಾಗ ನೀರಿನಲ್ಲಿ ಮುಳುಗಲು ಕಾರಣವೇನು…..?

* ಹೊಟ್ಟೆ ನೋವಿಗೆ ಏಲಕ್ಕಿ ಪುಡಿಯನ್ನು ಹಿಪ್ಪಲಿ ಬೇರಿನ ಪುಡಿ ಮತ್ತು ತುಪ್ಪದ ಜೊತೆ ಸೇವಿಸಿದರೆ ಹೊಟ್ಟೆ ನೋವು ನಿವಾರಣೆಯಾಗುತ್ತದೆ.

* ರಕ್ತಹೀನತೆ ಇದ್ದಲ್ಲಿ, ಒಂದು ಚಿಟಿಕೆ ಏಲಕ್ಕಿ ಪುಡಿ ಮತ್ತು ಒಂದು ಚಮಚ ಅರಿಶಿಣದ ಪುಡಿಯನ್ನು ಒಂದು ಲೋಟ ಹಾಲಿನೊಂದಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ರಕ್ತ ಹೀನತೆ ನಿವಾರಣೆಯಾಗುತ್ತದೆ.

* ಆ್ಯಸಿಡಿಟಿ ನಿವಾರಣೆಗೆ ಒಂದೆರಡು ಏಲಕ್ಕಿಯನ್ನು ಪುಡಿ ಮಾಡಿ ಬಿಸಿನೀರಿನಲ್ಲಿ ಹಾಕಿ ಕುದಿಸಿ ನಂತರ ಕುಡಿದರೆ ಆ್ಯಸಿಡಿಟಿ ನಿವಾರಣೆಯಾಗುತ್ತದೆ.

* ಏಲಕ್ಕಿ ಪುಡಿ ಹಾಕಿ ಮಾಡಿದ ಕಷಾಯಕ್ಕೆ 4 ರಿಂದ 5 ಪುದೀನಾ ಎಲೆಯ ರಸ ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.

* ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ, ಜೀರ್ಣಶಕ್ತಿ ವೃದ್ಧಿಸುತ್ತದೆ.

* ವಾತ, ಪಿತ್ತ, ಕಫ, ದಂತ ರೋಗ ಮತ್ತು ಬಾಯಿ ವಾಸನೆ ನಿವಾರಣೆಗೆ ಏಲಕ್ಕಿ ಉತ್ತಮ ಪರಿಹಾರ.

* ಏಲಕ್ಕಿಯ ಎಲೆ ಮತ್ತು ಬೇರಿನ ಕಷಾಯವನ್ನು ಸೇವಿಸಿದರೆ ಭೇದಿ ನಿಲ್ಲುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...