ಈರುಳ್ಳಿ, ಅಡುಗೆಗೆ ರುಚಿ ಕೊಡುವ ಜೊತೆ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಸಿಪ್ಪೆಯಿಂದಲೂ ಗಂಟಲಿನ ಸೋಂಕನ್ನು ನಿವಾರಣೆ ಮಾಡಬಹುದು ಎಂಬುದು ನಿಮಗೆ ಗೊತ್ತೇ…?
ಈರುಳ್ಳಿ ಸಿಪ್ಪೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಹತ್ತು ನಿಮಿಷ ಬಿಡಿ. ಬಳಿಕ ಅದೇ ನೀರಿನಿಂದ ಬಾಯಿ ಮುಕ್ಕಳಿಸಿ. ಅಥವಾ ಆ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯಿರಿ ಇದರಿಂದ ಗಂಟಲಿನ ಸೋಂಕು ಕಡಿಮೆಯಾಗುತ್ತದೆ.
ಕಾಲುಗಳಲ್ಲಿ ಸೆಳೆತ, ನೋವು ಆಗುತ್ತಿದ್ದರೆ ನೀವು ಈರುಳ್ಳಿ ಸಿಪ್ಪೆಯನ್ನು ಈ ರೀತಿಯಲ್ಲಿ ಬಳಸಿಕೊಳ್ಳಬಹುದು. ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಈರುಳ್ಳಿ ಸಿಪ್ಪೆ ಹಾಕಿ. ಈ ನೀರನ್ನು ಹತ್ತರಿಂದ ಹದಿನೈದು ನಿಮಿಷ ಚೆನ್ನಾಗಿ ಕುದಿಸಿ ಇದರಲ್ಲಿ ಕಾಲು ಇಟ್ಟುಕೊಳ್ಳಿ.
ಈರುಳ್ಳಿ ಸಿಪ್ಪೆಗಳು ಗಿಡಗಳ ಬೆಳವಣಿಗೆಯಲ್ಲಿ ಫರ್ಟಿಲೈಸರ್ ಆಗಿ ಕೆಲಸ ಮಾಡುತ್ತವೆ. ಈರುಳ್ಳಿ ಸಿಪ್ಪೆ ನೆನೆಸಿಟ್ಟ ನೀರನ್ನು ಒಂದು ದಿನದ ಬಳಿಕ ಗಿಡದ ಬುಡಕ್ಕೆ ಸುರಿಯಿರಿ. ವಾರದಲ್ಲಿ ಒಂದು ಬಾರಿ ಈ ರೀತಿ ಮಾಡಿ. ಇದರಿಂದ ಗಿಡಗಳಿಗೆ ಫರ್ಟಿಲೈಜರ್ ದೊರೆಯುತ್ತದೆ.