alex Certify ʼಆರ್ಥಿಕʼ ವೃದ್ಧಿಗೆ ಇಲ್ಲಿದೆ ಸರಳ ಉಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆರ್ಥಿಕʼ ವೃದ್ಧಿಗೆ ಇಲ್ಲಿದೆ ಸರಳ ಉಪಾಯ

ಧನವಂತ ರಾವಣ ಎಲ್ಲ ಶಾಸ್ತ್ರ- ಪದ್ಧತಿಗಳನ್ನು ತಿಳಿದವನಾಗಿದ್ದ. ರಾವಣ ಜ್ಯೋತಿಷ್ಯ, ತಂತ್ರ, ಮಂತ್ರ ಸೇರಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದ ಎನ್ನಲಾಗಿದೆ.

ಇದರಲ್ಲೊಂದು ರಾವಣ ಸಂಹಿತೆ. ಇದರಲ್ಲಿ ರಾವಣ ಬಿಲ್ವ ಪತ್ರೆ ಪೂಜೆಯ ವಿಶೇಷತೆಯನ್ನು ಹೇಳಿದ್ದಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾವಣ ಸಂಹಿತೆಯ ನಾಲ್ಕನೇ ಅಧ್ಯಯನದಲ್ಲಿ ಬಿಲ್ವ ಪತ್ರೆಯ ಮಹತ್ವವನ್ನು ಹೇಳಲಾಗಿದೆಯಂತೆ. ಇದರಲ್ಲಿರುವ ಪದ್ಧತಿಯನ್ನು ಅನುಸರಿಸಿ ನೀವೂ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು.

ರಾವಣ ಸಂಹಿತೆ ಪ್ರಕಾರ ಕಾರ್ತಿಕ ಅಮಾವಾಸ್ಯೆಯಂದು ಬಿಳಿಯ ಹೂವಿನ ಸಸಿ  ಹಾಗೂ ಬಿಲ್ವಪತ್ರೆ ಸಸಿಯನ್ನು ನೆಡುವುದರಿಂದ ಲಕ್ಷ್ಮಿಯ ಕೃಪೆ ಲಭಿಸುತ್ತದೆ.

ಕಾರ್ತಿಕ ಅಮಾವಾಸ್ಯೆಯಂದು ನಾಲ್ಕು ಅಥವಾ ಐದು ಎಲೆಯ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸಬೇಕು. ಇದರಿಂದ ಸಂಪತ್ತಿನ ಲಕ್ಷ್ಮಿ ಸಂತೋಷಗೊಳ್ತಾಳೆ.

ಕಾರ್ತಿಕ ಮಾಸದಲ್ಲಿ ಬೆಳಿಗ್ಗೆ ಬಿಲ್ವಪತ್ರೆ ಗಿಡಕ್ಕೆ ನೀರು ಹಾಕುವುದು ಹಾಗೆ ಸಂಜೆ ಗಿಡದ ಬಳಿ ದೀಪ ಹಚ್ಚುವುದರಿಂದ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.

ಅಪಾರ ಪ್ರಮಾಣದಲ್ಲಿ ಧನ ಪ್ರಾಪ್ತಿಯಾಗಬೇಕೆಂದು ಬಯಸುವವರು ಕಾರ್ತಿಕ ಮಾಸದಲ್ಲಿ ಬಿಲ್ವಪತ್ರೆ ಬಳಿ ಕುಳಿತು ಲಕ್ಷ್ಮಿ ಹವನ ಮಾಡಬೇಕು.

ರಾವಣ ಸಂಹಿತೆ ಪ್ರಕಾರ ಬಿಲ್ವಪತ್ರೆ ಹಾಗೂ ತಾಮ್ರದ ವಿಶೇಷ ಸಂಯೋಜನೆಯಿಂದ ಚಿನ್ನವನ್ನು ಮಾಡಬಹುದಂತೆ.

ಕಾರ್ತಿಕ ಮಾಸದಂದು ಬಿಲ್ವಪತ್ರೆ ಗಿಡದ ಕೆಳಗೆ ಕುಳಿತು ಶ್ರೀಸೂಕ್ತವನ್ನು ಜಪಿಸಿದ್ರೆ ಅಕ್ಷಯ ಲಕ್ಷ್ಮಿ ತೃಪ್ತಳಾಗ್ತಾಳೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...