alex Certify ʼಆರೋಗ್ಯʼ ಸಮಸ್ಯೆಗಳಿಗೆ ಸುಲಭ ಪರಿಹಾರ ಬಿಸಿ ಹಾಲಿಗೆ ಬೆರೆಸಿದ ತುಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆರೋಗ್ಯʼ ಸಮಸ್ಯೆಗಳಿಗೆ ಸುಲಭ ಪರಿಹಾರ ಬಿಸಿ ಹಾಲಿಗೆ ಬೆರೆಸಿದ ತುಳಸಿ

ತುಳಸಿ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರ ಒದಗಿಸಬಲ್ಲ ಗಿಡಮೂಲಿಕೆ. ಅದರಲ್ಲೂ ಹಾಲಿನ ಜೊತೆಗೆ ತುಳಸಿಯನ್ನು ಬೆರೆಸಿದ್ರೆ ಖಾಯಿಲೆಗಳಿಗೆ ಅದು ರಾಮಬಾಣ. ಕುದಿಯುವ ಹಾಲಿಗೆ 3-4 ತುಳಸಿ ಎಲೆಗಳನ್ನು ಹಾಕಿಕೊಂಡು ಕುಡಿದರೆ ಅದರಿಂದ ಅನೇಕ ಲಾಭಗಳಿವೆ.

ನಿಮ್ಮ ದೇಹದಲ್ಲಿ ಜ್ವರದ ಲಕ್ಷಣಗಳೇನಾದ್ರೂ ಇದ್ರೆ ತುಳಸಿ ಅದನ್ನು ದೂರ ಮಾಡುತ್ತದೆ. ಉರಿಯೂತ ಉಂಟು ಮಾಡುವ ಅಂಶಗಳನ್ನೆಲ್ಲ ನಾಶ ಮಾಡಿ, ಶೀಘ್ರದಲ್ಲೇ ಜ್ವರವನ್ನು ಗುಣಪಡಿಸುತ್ತದೆ.

ಬಿಸಿ ಹಾಲಿಗೆ ತುಳಸಿ ಎಲೆಗಳನ್ನು ಬೆರೆಸಿ ಕುಡಿಯುವುದರಿಂದ ದೇಹದ ನರ ವ್ಯವಸ್ಥೆಗೆ ಆರಾಮ ಸಿಗುತ್ತದೆ. ಇದು ಒತ್ತಡ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ಖಿನ್ನತೆಯನ್ನು ಕೂಡ ದೂರ ಮಾಡುತ್ತದೆ.

ದೇಹದಲ್ಲಿರುವ ಯೂರಿಕ್ ಆ್ಯಸಿಡ್ ಪ್ರಮಾಣ ಕೂಡ ಕಡಿಮೆಯಾಗಿ, ಮೂತ್ರಕೋಶದಲ್ಲಿ ಕಲ್ಲು ಬೆಳೆದಿದ್ದರೆ ಅದು ಕೂಡ ನಿಧಾನವಾಗಿ ಕರಗಿ ಹೋಗುತ್ತದೆ. ತುಳಸಿ ಮತ್ತು ಹಾಲು ಎರಡರಲ್ಲೂ ಆ್ಯಂಟಿ ಒಕ್ಸಿಡೆಂಟ್ ಗಳಿವೆ. ಪೋಷಕಾಂಶ ಕೂಡ ಹೇರಳವಾಗಿರುವುದರಿಂದ ನಮ್ಮ ದೇಹದ ಇಮ್ಯುನ್ ಸಿಸ್ಟಮ್ ಸುಧಾರಿಸುತ್ತದೆ.

ಅಷ್ಟೇ ಅಲ್ಲ, ತುಳಸಿ ಮತ್ತು ಹಾಲಿನ ಈ ಮಿಶ್ರಣ ಅನೇಕ ಬಗೆಯ ಕ್ಯಾನ್ಸರ್ ಸೆಲ್ಸ್ ಹರಡದಂತೆ ತಡೆಯುತ್ತದೆ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಅಂಶಗಳಿರೋದ್ರಿಂದ ಗಂಟಲು ನೋವು, ನೆಗಡಿ ಮತ್ತು ಒಣಕೆಮ್ಮಿಗೂ ಕೂಡ ಇದು ಅತ್ಯುತ್ತಮ ಔಷಧ. ಹಾಲು ಮತ್ತು ತುಳಸಿ ಮಿಶ್ರಣದಿಂದ ತಲೆನೋವಿಗೂ ಪರಿಹಾರ ಸಿಗುತ್ತದೆ. ಪ್ರತಿನಿತ್ಯ ಹಾಲಿಗೆ ತುಳಸಿ ಬೆರೆಸಿ ಕುಡಿಯುತ್ತಾ ಬಂದರೆ ತಲೆನೋವು ಮಾಯವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...